(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.22: ಕರಾವಳಿಯ ಹೆಮ್ಮೆಯ ಸಾಧಕ, ವಿಜಯ ಬ್ಯಾಂಕಿನ ಅಭಿವೃದ್ದಿಗೆ ಕಾರಣರಾಗಿದ್ದ ಮುಲ್ಕಿ ಸುಂದರರಾಮ ಶೆಟ್ಟಿ ಅವರಿಗೆ ರಾಜ್ಯ ಸರಕಾರ ಗೌರವ ನೀಡಿದೆ. ಮೂರು ವರ್ಷಗಳ ಹಿಂದೆ ಜಟಾಪಟಿಗೆ ಕಾರಣವಾಗಿದ್ದ ಸುಂದರ ರಾಮ ಶೆಟ್ಟಿ ಯವರ ಹೆಸರಿನಲ್ಲಿ ಮಂಗಳೂರಿನಲ್ಲಿ ರಸ್ತೆ ನಾಮಕರಣ ಮಾಡುವುದಕ್ಕೆ ನಗರಾಭಿವೃದ್ಧಿ ಸಚಿವಾಲಯ ಒಪ್ಪಿಕಂಡಿದ್ದು ಹಿಂದಿನ ಆದೇಶವನ್ನು ಮರು ಜಾರಿಗೆ ಸೂಚನೆ ನೀಡಿದೆ.
2020 ಸೆ.5 ರಂದು ಹಳೆಯ ಆದೇಶವನ್ನು ಊರ್ಜಿತಗೊಳಿಸಿ ನಗರಾಭಿವೃದ್ಧಿ ಸಚಿವಾಲಯ ಮೂಲದ ಆದೇಶ ಮಾಡಿಸಿದೆ. ಅಲ್ಲಿಗೆ ಎರಡು ಸಮುದಾಯಗಳ ನಡುವಿನ ಪ್ರತಿಷ್ಟೆಗೆ ಕಾರಣವಾಗಿದ್ದ ರಸ್ತೆ ನಾಮಕರಣ ವಿವಾದಕ್ಕೆ ಇತಿಶ್ರೀ ಹಾಕಲಾಗಿದೆ. ಮಂಗಳೂರಿನ ಅಂಬೇಡ್ಕರ್ ವೃತ್ತದಿಂದ, ಲೈಟ್ ಹೌಸ್ ಹಿಲ್ ಬಳಿಯ ಕೆಥೋಲಿಕ್ ಕ್ಲಬ್ ವರೆಗಿನ ರಸ್ತೆಗೆ ಸುಂದರರಾಮ ಶೇಟ್ಟಿ ಹೆಸರು ನಾಮಕರಣ ಮಾಡಲು 2017 ಮೇ.24 ರಂದು ಆಗಿನ ರಾಜ್ಯ ಸರಕಅರ ಆದೇಶ ಮಾಡಿತ್ತು. ಆದರೆ, ಕೊನೆ ಕ್ಷಣದಲ್ಲಿ ಎಚ್ಚೆತ್ತುಕೊಂಡ ಆಲೋಶಿಯಸ್ ಕಾಲೇಜು ಆಡಳಿತ, ಆಗ ಮಂಗಳೂರು ಶಾಸಕರಾಗಿದ್ದ ಜೆ.ಆರ್ ಲೋಬೊ ಮೂಲಕ ಕೋರ್ಟಿನಿಂದ ತಡೆಯಾಜೆ ತಂದಿತ್ತು. ಅಲ್ಲದೆ, ರಸ್ತೆಗೆ ಸುಂದರರಾಮ ಶೇಟ್ಟಿ ಹೆಸರಿಡುವುದಕ್ಕೆ ಆಕ್ಷೇಪ ಸೂಚಿಸಿ ವಿದ್ಯಾರ್ಥಿಗಳ ಮೂಲಕ ಪ್ರತಿಭಟನೆಯನ್ನೂ ನಡೆಸಲಾಗಿತ್ತು. ಬಳಿಕ ಕೋರ್ಟ್ ಮತ್ತು ಮಹಾನಗರ ಪಾಲಿಕೆಯಲ್ಲಿ ಜಟಾಪಟಿ ನಡೆದು ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು.