ಆಲಂಕಾರು: ಚಲಿಸುತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರ ➤ ಚಾಲಕ ಪ್ರಾಣಾಪಯದಿಂದ ಪಾರು



(ನ್ಯೂಸ್ ಕಡಬ) newskadaba.com ಕೊಯಿಲ, ಸೆ.12: ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕೊಯಿಲ ಸಮೀಪದ ನೀರಾಜೆ ಎಂಬಲ್ಲಿ ಚಲಿಸುತ್ತಿದ್ದ ಓಮ್ನಿಯ ಮೇಲೆ ಮರವೊಂದು ಮುರಿದು ಬಿದ್ದ ಘಟನೆ ಇಂದು(ಶನಿವಾರ) ನಡೆದಿದೆ. ಮರ ಬಿದ್ದ ಪರಿಣಾಮದಿಂದಾಗಿ ಓಮ್ನಿ ಜಖಂಗೊಂಡು ಅದರ ಚಾಲಕ, ಕೊಯಿಲ ಶ್ರೀರಾಮ ಎಲೆಕ್ಟ್ರಿಕಲ್ಸ್‌ನ ಮಾಲಕ ಯೋಗಿಶ್‌ ಅಪಾಯದಿಂದ ಪಾರಾಗಿದ್ದಾರೆ.





 

 

ನಿರಂತರವಾಗಿ ಎಡೆಬಿಡದೆ ಸುರುಯುತ್ತಿದ್ದ ಮಳೆಗೆ ಕೊಯಿಲ ನೀರಾಜೆ ಸಮೀಪ ರಸ್ತೆ ಬದಿಯಲ್ಲಿದ್ದ ಹಲಸಿನ ಮರವೊಂದು ಮುರಿದು ಬಿದ್ದಿದೆ. ಈ ಘಟನೆಯ ಪರಿಣಾಮ ಸುಮಾರು ಅರ್ಧಗಂಟೆಯಷ್ಟುರಸ್ತೆಯಲ್ಲಿ ವಾಹನ ಸಂಚಾರಕ್ಕು ಅಡಚಣೆ ಉಂಟಾಗಿತ್ತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.






 

 

 

error: Content is protected !!
Scroll to Top