ಬಿಳಿನೆಲೆ ಅಕ್ರಮ ಶೆಡ್ ವಿಚಾರ ➤ ದೇವಪ್ಪ ಗೌಡರ ಅಂಗಡಿಯ ಲಾಕ್ ಮತ್ತೆ ಓಪನ್



(ನ್ಯೂಸ್ ಕಡಬ) newskadaba.com ಬಿಳಿನೆಲೆ, ಸೆ.05:  ಕಳೆದ ಕೆಲವು ದಿನಗಳ ಹಿಂದೆ ಭಾರಿ ಸುದ್ದಿ ಮಾಡಿದ್ದ ಬಿಳಿನೆಲೆ ಅಕ್ರಮ ಶೆಡ್ ವಿಚಾರದಲ್ಲಿ ಕೊನೆಗೆ ಗ್ರಾ. ಪಂ ಅನಧಿಕೃತ ಅಂಗಡಿಗಳಿಗೆ ಬೀಗ ಜಡಿದಿತ್ತು. ಈ ವೇಳೆ ದೇವಪ್ಪ ಗೌಡ ಎಂಬುವರಿಗೆ ಸೇರಿದ ಅಂಗಡಿಯನ್ನು ಲಾಕ್ ಮಾಡಲಾಗಿತ್ತು ಇಧೀಗಾ ಗೈ ಕೋರ್ಟ್ ಆದೇಶದಂತೆ ಬೀಗ ಜಡಿದಿದ್ದ ಅಂಗಡಿಯ ಲಾಕ್ ಮತ್ತೆ ಓಪನ್ ಆಗಿದೆ.





 

ದೇವಪ್ಪ ಗೌಡ ಎಂಬವರಿಗೆ ಸೇರಿದ ಅಂಗಡಿ ಹಾಗೂ ವಾಸದ ಮನೆಗೆ ಏಕಾಏಕಿ ಬೀಗ ಜಡಿದಿರುವ ಪ್ರಕರಣಕ್ಕೆ ಸಂಬಂಧಿಸಿ ದೇವಪ್ಪ ಗೌಡರವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು ಈ ಅರ್ಜಿ ವಿಚಾರಣೆಗೆ ನಡೆಸಿದ ಹೈಕೋರ್ಟ್‌ ದೇವಪ್ಪ ಗೌಡರ ಸ್ವಾಧಿನತೆ ಇದ್ದ ಅಂಗಡಿ ಕಟ್ಟಡ ಹಾಗೂ ವಾಸದ ಮನೆಗೆ ಜಡಿದಿರುವ ಬೀಗವನ್ನು ಕೂಡಲೇ ತೆರವುಗೊಳಿಸಿ ಅವರ ಉಪಯೋಗಕ್ಕೆ ನೀಡಬೇಕು, ಅಲ್ಲದೆ ಅದರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪಂಚಾಯತ್‌ ದೇವಪ್ಪ ಗೌಡ ಮಾಲಕತ್ವದ ದಯಾನಂದ ಅವರ ಅಂಗಡಿ ಹಾಗೂ ವಾಸದ ಮನೆಯ ಬೀಗವನ್ನು ತೆಗೆದ ಘಟನೆ ಸೆ.5 ರಂದು 4.30 ರ ಸುಮಾರಿಗೆ ನಡೆದಿದೆ. ಬಿಳಿನೆಲೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶೀನ, ಸಿಬ್ಬಂದಿ ಶೇಷಪ್ಪ ಹಾಗೂ ಅಂಗಡಿ ಮಾಲಕ ದಯಾನಂದ ಮೊದಲಾದವರು ಉಪಸ್ಥಿತರಿದ್ದರು.






 

error: Content is protected !!
Scroll to Top