(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 05. ಡ್ರಗ್ ಮಾಫಿಯಾಗೆ ಸಂಬoಧಿಸಿದಂತೆ ಸ್ಯಾಂಡಲ್ ವುಡ್ ನಟಿ ರಾಗಿಣಿಯನ್ನ ಸಿಸಿಬಿ ಪೊಲೀಸರು ಬಂಧಿಸಿ, ಬಳಿಕ ಕೋರ್ಟಿಗೆ ಹಾಜರು ಪಡಿಸಿ ವಶಕ್ಕೆ ಪಡೆದಿದ್ದ ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ಈ ವೇಳೆ ನಟಿ ರಾಗಿಣಿ ನಾನು ಡ್ರಗ್ಸ್ ತೆಗೆದುಕೊಂಡಿರೋದು ನಿಜ. ಎರಡು ಬಾರಿ ನನ್ನ ಸ್ನೇಹಿತ ಡ್ರಗ್ಸ್ ತಂದುಕೊಟ್ಟಿದ್ದ. ನನ್ನ ಫ್ಲಾಟ್ ನಲ್ಲಿಯೇ ನಾನು ಡ್ರಗ್ಸ್ ಸೇವಿಸಿದ್ದೆ ಎಂದು ರಾಗಿಣಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಒಂದು ಪಾರ್ಟಿಯಲ್ಲಿ ರಾಗಿಣಿ ಮದ್ಯದ ಜೊತೆಗೆ ಎಂ.ಡಿ.ಎಂ.ಎ ಟ್ಯಾಬ್ಲೆಟ್ ಕೂಡ ಸೇವಿಸಿದ್ರು, ಆ ಬಳಿಕ ಅವರು ಡ್ರಗ್ಸ್ ಅಡಿಕ್ಟ್ ಆಗಿದ್ದಾರೆ ಎಂದು ರಾಗಿಣಿ ಆಪ್ತ ರವಿಶಂಕರ್ ಪೊಲೀಸರ ಮುಂದೆ ಬಾಯಿ ಬಿಟ್ಟಿದಾನೆ. ಜೊತೆಗೆ ದೊಡ್ಡ ದೊಡ್ಡ ಪಾರ್ಟಿಗಳನ್ನ ಆಯೋಜಿಸಿ ಅಲ್ಲಿಗೆ ಬರುವ ಶ್ರೀಮಂತರಿಗೆ ಡ್ರಗ್ಸ್ ಸಪ್ಲೈ ಮಾಡುವ ಬಗ್ಗೆಯೂ ರಾಗಿಣಿ ಮೇಲೆ ಆರೋಪಗಳು ಕೇಳಿಬಂದಿದೆ.