(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 03: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಭಾಗದಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಾಲೇಜು ವಿದ್ಯಾರ್ಥಿಗಳು ಯುವಕರನ್ನು ಗುರಿಯಾಗಿಸಿಕೊಂಡು ಮಾದಕ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಕೊಲೆ,ಸುಲಿಗೆ,ಅತ್ಯಾಚಾರದಂತಹ ಅಪರಾಧ ಚಟುವಟಿಕೆಗಳ ಹಿಂದೆ ಡ್ರಗ್ಸ್ ಜಾಲವು ಕಂಡು ಬರುತ್ತಿದೆ.
ಈ ಜಾಲವನ್ನು ಸಂಪೂರ್ಣವಾಗಿ ಮಟ್ಟ ಹಾಕಲು ಕ್ಯಾಂಪಸ್ ಫ್ರಂಟ್ ಸುಳ್ಯ ವೃತ್ತ ನಿರೀಕ್ಷಕರಿಗೆ ಮನವಿ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಬೆಳ್ಳಾರೆ, ಸುಳ್ಯ ವಲಯ ಅಧ್ಯಕ್ಷರಾದ ಆರ್ಫಿದ್ ಅಡ್ಕಾರ್, ಕಾರ್ಯದರ್ಶಿ ಸಾಜಿದ್ ಸುಳ್ಯ, ವಲಯ ಸಮಿತಿ ಸದಸ್ಯರಾದ ಶಮಲ್ ಸುಳ್ಯ, ಎನ್‌ಎಂಸಿ ಪದವಿ ಕಾಲೇಜು ಅಧ್ಯಕ್ಷರಾದ ಮಿನಾಝ್ ಜಾಲ್ಸೂರು ಉಪಸ್ಥಿತರಿದ್ದರು.