(ನ್ಯೂಸ್ ಕಡಬ) newskadaba.com ಮಂಗಳೂರು. ಸೆ.03: ಸರಕಾರದ ನಿರ್ದೇಶನದಂತೆ ಬುಧವಾರದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕೆಲವನ್ನು ಹೊರತುಪಡಿಸಿ ಎಲ್ಲ ಸೇವೆಗಳು ಆರಂಭಗೊಂಡಿದೆ. ದುರ್ಗಾ ನಮಸ್ಕಾರ ಹೂವಿನ ಪೂಜೆ ಇತ್ಯಾದಿ ಎಲ್ಲ ಸೇವೆಗಳು ಕೊರೋನಾದ ವಿಚಾರವಾಗಿ ಸರಕಾರ ನಿದೇರ್ಶಿಸಿರುವ ನಿಯಮಗಳ ಪಾಲನೆಯೊಂದಿಗೆ ನಡೆಯಲಿದೆ.
ಭಕ್ತಾದಿಗಳಿಗೆ ಸಾಮಾಜಿಕ ಅಂತರ ಕಡ್ಡಾಯ . ವೃದ್ಧರಿಗೆ ಹಾಗೂ ಹತ್ತು ವರ್ಷದ ಕೆಳಗಿನ ಮಕ್ಕಳಿಗೆ ದೇವಳದ ಪ್ರವೇಶ ನಿಷೇಧದಂತಹಾ ನಿಯಮಗಳೂ ಮುಂದುವರಿಯಲಿದೆ. ಹಣ್ಣುಕಾಯಿ ಸೇವೆಯನ್ನು ಕೊರೋನಾ ಮುಗಿಯವ ಮರೆಗೆ ನಡೆಸದಂತೆ ವಿರ್ಭಂದಿಸಲಾಗಿದೆ. ಭಕ್ತಾದಿಗಳಿಗೆ ತೀರ್ಥ ನಿಡಲಾಗುವುದಿಲ್ಲ. ಅನ್ನಪ್ರಾಶನ ಸೇವೆಗೆ ಮಕ್ಕಳಿಗೆ ದೇವಳಕ್ಕೆ ಪ್ರವೇಶವಿಲ್ಲ. ಅನ್ನ ಪ್ರಸಾದವೂ ಇರುವುದಿಲ್ಲ. ಹೀಗೆ ಕೆಲವೊಂದು ಸೇವೆಗಳು ಸ್ಥಗಿತ ಗೊಳಿಸಲಾಗಿದೆ. ಎಂದು ಆಡಳಿತ ಮಂಡಳಿ ತಿಳಿಸಿದೆ.