ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ ➤ ಖದೀಮ ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಕುಂದಾಪುರ ಸೆ.02: ಬೊಲೆರೊ ವಾಹನದಲ್ಲಿ 3 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿರುವುದನ್ನು ಕಾವ್ರಾಡಿಯ ಗ್ರಾಮದ ಜನತಾ ಕಾಲೋನಿಯಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳೆದ ದಿನ ಬೆಳಿಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯ ಸಹಾಯಕ ಉಪ ಪೊಲೀಸ್ ನಿರೀಕ್ಷಕ ರವೀಶ್ ಹೊಳ್ಳ ಕರ್ತವ್ಯದಲ್ಲಿರುವಾಗ ಕಾವ್ರಾಡಿ ಧೂಪದಕಟ್ಟೆ ಕಡೆಯಿಂದ ಒಳರಸ್ತೆಯಲ್ಲಿ ಒಂದು ದ್ವಿಚಕ್ರ ವಾಹನ ಹಾಗೂ ಅದರ ಹಿಂಬದಿ ಒಂದು ಕಪ್ಪು ಬೊಲೆರೊ ವಾಹನವನ್ನು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದಿದ್ದಾರೆ.

ಈ ವಾಹನಗಳನ್ನು ನಿಲ್ಲಿಸಲು ಸೂಚನೆ ನೀಡಿದ್ದರೂ ಕೂಡಾ ದ್ವಿಚಕ್ರ ವಾಹನ ಚಾಲಕನು ಕ್ಯಾರೆ ಅನ್ನದೆ ವಾಹನ ನಿಲ್ಲಿಸದೆ ಮುಂದಕ್ಕೆ ಹೋಗಿದ್ದು, ಅದರ ಹಿಂಬದಿ ಬರುತ್ತಿದ್ದ ಬೊಲೆರೊ ಚಾಲಕನು ವಾಹನವನ್ನು ಸ್ವಲ್ಪ ಹಿಂಬದಿ ರಸ್ತೆಯ ಬದಿಯಲ್ಲಿ ನಿಲ್ಲಿಸಿ ಅದರಲ್ಲಿದ್ದ ಇನ್ನೊರ್ವನೊಂದಿಗೆ ಪರಾರಿಯಾಗಿದ್ದಾನೆ. ಚಾಲಕನು ಕಂಡ್ಲೂರಿನ ಸಮೀರ್, ಇನ್ನೋರ್ವ ಮುತಾಯಿಬ್, ಬೈಕ್ ಸವಾರ ಕಂಡ್ಲೂರಿನ ರಿದಾನ್ ಎಂದು ಗುರುತಿಸಲಾಗಿದೆ. ಬೊಲೆರೋ ವಾಹನದ ಒಳಗಡೆ ಆಪಾದಿತರು ಇದರ ಹಿಂಬದಿ ಸೀಟ್ ತೆಗೆದು ಅದರಲ್ಲಿ 3 ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಕಾಲುಗಳನ್ನು ಕಟ್ಟಿ ತುಂಬಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಶಾಲಾ ವಾಹನ ಹರಿದು ಮಗು ಮೃತ್ಯು..!

error: Content is protected !!
Scroll to Top