ಮೂರ್ಖತನದ ಪರಮಾವಧಿ: ಹುಚ್ಚುನಾಯಿ ಭೀತಿಗೆ ಮನೆಮುಂಭಾಗದ ತಂತಿಗೆ ವಿದ್ಯುತ್ ಹಾಯಿಸಿ, ತಾನೇ ತುಳಿದು ಸಾವನ್ನಪ್ಪಿದ !

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಆ. 31: ಹುಚ್ಚು ನಾಯಿ ಭೀತಿಯಿಂದ ಮನೆ ಮುಂಭಾಗದ ಗೇಟ್‌ಗೆ ಅಡ್ಡಲಾಗಿ ತಂತಿಗೆ ವಿದ್ಯುತ್ ಹರಿಬಿಟ್ಟ ವ್ಯಕ್ತಿ ಅದೇ ತಂತಿಯನ್ನು ತುಳಿದು ಮೃತಪಟ್ಟಿರುವ ಘಟನೆ ಸೊರಬ ಪಟ್ಟಣದ ಕಾನಕೇರಿಯಲ್ಲಿ ಕಳೆದ ರಾತ್ರಿ ನಡೆದಿದೆ.

ನಿಂಗಪ್ಪ ಪುಟ್ಟಪ್ಪ (58) ಮೃತ ದುರ್ಧೈವಿ. ಕೆಲ ದಿನಗಳಿಂದ ಹುಚ್ಚು ನಾಯಿಯೊಂದು ಮನೆಯ ಅಂಗಳ ಮಾತ್ರವಲ್ಲದೇ ಮನೆಯನ್ನು ಪ್ರವೇಶ ಮಾಡಿತ್ತು. ಇದರಿಂದ ಕುಟುಂಬಸ್ಥರು ಭಯಭೀತರಾಗಿದ್ದರು. ಮನೆಯ ಅಂಗಳದ ಗೇಟ್‌ನ ಮುಂಭಾಗ ತಂತಿ ಕಟ್ಟಿ ವಿದ್ಯುತ್ ಹಾಯಿಸಿದ್ದರು. ರಾತ್ರಿ ಅದೇ ತಂತಿ ತುಳಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ರಾಕೇಶ್ ಕುಮಾರ್ ನೀಡಿದ ದೂರಿನನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಮಂಗಳೂರು: ಪಬ್ ಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಹಿನ್ನೆಲೆ ➤ ನಗರದ ಪಬ್ ಗಳ ಮೇಲೆ ದಿಢೀರ್ ಪೊಲೀಸ್ ದಾಳಿ

 

ಗ್ರಾಮೀಣ ಪ್ರದೇಶದಲ್ಲಿ ಕೆಲ ರೈತರು ತಮ್ಮ ಬೆಳೆಗಳ ರಕ್ಷಣೆಗೆ ಯುಪಿಎಸ್ ವಿದ್ಯುತ್ ಹಾಯಿಸುವುದು ಸಾಮಾನ್ಯ. ಕೆಲವರು ನೇರವಾಗಿ ವಿದ್ಯುತ್ ಹಾಯಿಸಿ, ಪ್ರಾಣಿ ಬೇಟೆ ಮಾಡುತ್ತಾರೆ ಎನ್ನಲಾಗುತ್ತದೆ. ಆದರೆ, ಪಟ್ಟಣ ಪ್ರದೇಶದಲ್ಲಿಯೇ ಮನೆಯ ಮುಂಭಾಗದ ಗೇಟ್‌ಗೆ ವಿದ್ಯುತ್ ಹಾಯಿಸಿರುವ ಪ್ರಕರಣ ಇದೀಗ ಜನತೆಯಲ್ಲಿ ಆತಂಕ ಮೂಡಿಸಿದೆ.ನಿತ್ಯ ಬೆಳಗ್ಗೆ ಪತ್ರಿಕೆ ಹಂಚುವ, ಹಾಲು ವಿತರಿಸುವವರು ಮನೆಗಳಿಗೆ ತೆರಳಲು ಸಹ ಭಯಭೀತರನ್ನಾಗಿಸಿದ್ದು, ಇಂತಹ ಘಟನೆಗಳು ಮೂರ್ಖತನದ ಪರಮಾವಧಿ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

 

error: Content is protected !!
Scroll to Top