ಸೆ. 2 ಮತ್ತು 3ರಂದು ಅಲೋಷಿಯಸ್ ಕಾಲೇಜಿನಲ್ಲಿ ವರ್ಚುವಲ್ಸ್ ಸಂಹವನ ಮಾಧ್ಯಮದ ಮೂಲಕ ಅಂತರಾಷ್ಟ್ರೀಯ ವಿಚಾರ ಸಂಕಿರಣ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 30. ಸಂತ ಅಲೋಷಿಯಸ್ ಕಾಲೇಜಿನಲ್ಲಿ  ‘ಘನ ವಸ್ತುಗಳ ಭೌತಶಾಸ್ತ್ರೀಯ ಗುಣಗಳು’ ಎಂಬ ವಿಷಯದಲ್ಲಿ ವರ್ಚುವಲ್ಸ್ ಸಂಹವನ ಮಾಧ್ಯಮದ ಮೂಲಕ ಅಂತರಾಷ್ಟ್ರೀಯ ವಿಚಾರಸಂಕಿರಣವು ಸೆಪ್ಟೆಂಬರ್ 2 ಮತ್ತು 3 ರಂದು ನಡೆಯಲಿದೆ.

ವಿಚಾರಸಂಕಿರಣದಲ್ಲಿ ಆಸ್ಟ್ರೇಲಿಯಾ ನ್ಯಾಷನಲ್ ವಿಶ್ವವಿದ್ಯಾಲಯದ ಪ್ರೊಫೆಸರ್ ಚೆನ್ನಪತಿ ಜಗದೀಶ್ ರವರು ಪ್ರಮುಖ ಭಾಷಣಕಾರರಾಗಿರುತಾರೆ. ಅಮೇರಿಕಾದ ವಿವಿಧ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಡಾ| ದೀಪರಘು, ಡಾ .ಕೆ. ಪಿ. ಮೋಹನಚಂದ್ರ , ಡಾ| ಸ್ಮಿತಿಕ ಸುಬ್ರಮಣಿ ಅವರು ವಿವಿಧ ವಿಷಯಗಳ ಕುರಿತಾಗಿ ವಿಚಾರಗಳ ಮಂಡನೆ ಮಾಡಲಿದ್ದಾರೆ. ಪಾಂಡಿಚೇರಿ ಇಂಜಿನಿಯರಿಂಗ್ ಕಾಲೇಜಿನ ಡಾ. ಹರೀಶ್ ಕುಮಾರ್, ಸುರತ್ಕಲ್ ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ಡಾ. ಅರುಣ್ ಇಸ್ಲೂರ್, ಹುಬ್ಬಳ್ಳಿ ಕೆ. ಎಲ್.ಈ ಇಂಜಿನಿಯರಿಂಗ್ ಕಾಲೇಜಿನ ಡಾ. ಪಿ.ಸಿ. ಪಾಟೀಲ್ ಮತ್ತು ಹೈದರಾಬಾದ್ ಟಾಟಾ ಸಂಸ್ಥೆಯ ಡಾ. ಧವಳಸೂರಿ ಈ ವಿಚಾರ ಸಂಕಿರಣದಲ್ಲಿ ಭಾಷಣ ಮಾಡಲಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಸಂಶೋಧಕರು ತಮ್ಮ ಪ್ರಬಂಧ ಮಂಡಿಸಲಿದ್ದಾರೆ. ವಿಚಾರ ಸಂಕಿರಣವು ಪೂರ್ವಾಹ್ನ 10 ಕ್ಕೆ ಪ್ರಾರಂಭವಾಗಲಿದ್ದು ಕಾಲೇಜಿನ ಪ್ರಾoಶುಪಾಲರಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ವಿಚಾರ ಸಂಕಿರಣದ ಗೌರವ ಅಧ್ಯಕ್ಷರಾಗಿರುತಾರೆ. ವಿಚಾರ ಸಂಕಿರಣವು ಸಂಪೂರ್ಣ ಉಚಿತವಾಗಿದ್ದು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

error: Content is protected !!
Scroll to Top