ಕೊಳೆತ ಸ್ಥಿತಿಯಲ್ಲಿ ರಿಕ್ಷಾ ಚಾಲಕನೋರ್ವನ ಮೃತದೇಹ ಪತ್ತೆ



(ನ್ಯೂಸ್ ಕಡಬ) newskadaba.com ಪುತ್ತೂರು, ಆ. 30: ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿ ಬನ್ನೂರು ಎಂಬಲ್ಲಿ ರಿಕ್ಷಾ ಚಾಲಕನೋರ್ವನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ.





ಬನ್ನೂರು ಗ್ರಾಮದ ನಿರ್ಪಾಜೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯ ಹಳೆ ಮನೆಯೊಂದರ ಪಕ್ಕದ ಕೊಟ್ಟಿಗೆಯಲ್ಲಿ ಚಯರ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ಆಟೋ ಚಾಲಕ ಸುದರ್ಶನ್‌ (37) ಎಂಬವರ ಮೃತ ದೇಹ ಪತ್ತೆಯಾಗಿದೆ. ಇಂದು ಸ್ಥಳೀಯರಿಗೆ ಸುದರ್ಶನ ರೈ ಅವರ ಮನೆಯಿಂದ ದುರ್ನಾಥ ಬೀರುತ್ತಿರುವ ಕುರಿತು ಪರಿಶೀಲಿಸಿದಾಗ ಮನೆಯ ಕೊಟ್ಟಿಗೆಯಲ್ಲಿ ಸುದರ್ಶನ್‌ ಅವರ ಮೃತ ದೇಹ ಚಯರ್‌ ನಲ್ಲಿ ಕುಳಿತ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿದ್ದು ಘಟನೆಯ ಕುರಿತು ಪೊಲೀಸರಿಗೆ ಮತ್ತು ತವರು ಮನೆಯಲ್ಲಿರುವ ಸುದರ್ಶನ್‌ ಅವರ ಪತ್ನಿಗೆ ಮಾಹಿತಿ ನೀಡಲಾಗಿದೆ.






 

 

error: Content is protected !!
Scroll to Top