ಕಾಪು : ಬಲೆಗೆ ಬಿತ್ತು ರಾಶಿ…ರಾಶಿ ಮೀನುಗಳು

(ನ್ಯೂಸ್ ಕಡಬ) newskadaba.com ಕಾಪು. ಆ,30:  ನಗರದ ಮಟ್ಟು ಕಡಲತೀರದಲ್ಲಿ ಕೈರಂಪಣಿ ಬೆಲೆಗೆ ರಾಶಿ ರಾಶಿ ಮೀನುಗಳು ಸಿಲುಕಿದ್ದು, ಮೀನುಗಾರರಿಗೆ ಬಂಪರ್ ಡ್ರಾ ಹೊಡೆದಂತಾಗಿದೆ.ಈ ಬಾರಿ ಉಡುಪಿಯ ಮಟ್ಟು ಕಡಲತೀರದಲ್ಲಿ ಹಾಕಿದ ಕೈರಂಪಣಿ ಬಲೆಗೆ ಮೀನುಗಾರರ ನಿರೀಕ್ಷೆಗೂ ಮೀರಿ ವಿವಿಧ ಬಗೆಯ ಮೀನುಗಳು ಬಿದ್ದಿವೆ. ಹೀಗೆ ರಾಶಿ‌ ರಾಶಿ ಮೀನುಗಳನ್ನು ಕಂಡು ಮೀನುಗಾರರು ಫುಲ್ ಖುಷಿಯಾಗಿದ್ದು, ಮೀನನ್ನು‌ ಮಾರಾಟ ಮಾಡಿ ಉಳಿದವುಗಳನ್ನು ನೋಡಲು ಬಂದ ಊರಿನವರಿಗೂ ಫ್ರೀಯಾಗಿ ಹಂಚಿದ್ದಾರೆ.

ಹೀಗೆ ಬಲೆಯಿಂದ ಹೊರಗೆ ಬಂದು ಒದ್ದಾಡುತ್ತಿದ್ದ ಮೀನುಗಳು ಸಾರ್ವಜನಿಕರ ಪಾಲಾದವು. ಹೀಗೆ ತೀರದಲ್ಲಿ ಮೀನಿಾಗಿ ಜನಸ್ತೋಮವೇ ನೆರೆದಿತ್ತು. ಬಂಗುಡೆ, ಬೊಳಿಂಜಿರ್, ಕಲ್ಲೂರು, ಬೂತಾಯಿ, ಕೊಂತಿ, ಎಟ್ಟಿಯಂತಹ ಮೀನುಗಳು ಭಾರೀ ಪ್ರಮಾಣದಲ್ಲಿ ಬಲೆಗೆ ಬಿದ್ದಿವೆ. ಒಟ್ಟಾರೆಯಾಗಿ ಇಲ್ಲಿ ಮೀನುಗಾರರ ಬಲೆಗೆ ಸುಮಾರು ಐದು ಟನ್‌ಗಳಷ್ಟು ಮೀನು ಸಿಕ್ಕಿದೆ.

Also Read  ದಕ್ಷಿಣ ರಾಜ್ಯಗಳ ಡಿಜಿಪಿಗಳ ಸಮ್ಮೇಳನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

error: Content is protected !!
Scroll to Top