ಕೊರೋನಾದ ನಡುವೆ ಯಶಸ್ವಿಯಾದ ಹಜ್ ಯಾತ್ರೆ ಹಿನ್ನೆಲೆ ➤ ಉಮ್ರಾ ಯಾತ್ರೆಯ ಪುನರ್ ಆರಂಭಕ್ಕೆ ಸಜ್ಜು

 (ನ್ಯೂಸ್ ಕಡಬ) newskadaba.com ರಿಯಾದ್, ಆ.28. ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರೆ ಪುನರಾರಂಭಿಸುವುದಾಗಿ ಹಜ್ ಮತ್ತು ಉಮ್ರಾ ಸಚಿವಾಲಯ ಘೋಷಣೆ ಮಾಡಿದೆ.

ಕೋವಿಡ್ ಅಟ್ಟಹಾಸದ ನಡುವೆ ಹಜ್  ಯಾತ್ರೆ ಯಶಸ್ವಿಯಾದ ಸಂದರ್ಭದಲ್ಲಿ ಉಮ್ರಾ ತೀರ್ಥಯಾತ್ರೆ ಪ್ರಾರಂಭಿಸಲು ಸೌದಿ ತಯಾರಿ ನಡೆಸಿದ್ದು, ಐದು ತಿಂಗಳ ಕಾಲ ಸ್ಥಗಿತಗೊಂಡಿದ್ದ ಮಕ್ಕಾದಲ್ಲಿಉಮ್ರಾ ಯಾತ್ರೆಯ ಪುನರಾರಂಭಕ್ಕೆ ಸಜ್ಜಾಗಿದೆ. ಮಾರ್ಚ್‌ನಿಂದ ಉಮ್ರಾ ಯಾತ್ರೆಗೆ ನಿರ್ಬಂಧ ವಿಧಿಸಿ, ದೇಶದಲ್ಲಿ ಅಸ್ತಿತ್ವದಲ್ಲಿದ್ದ ಯಾತ್ರಿಕರನ್ನು ಕ್ರಮೇಣ ವಾಪಸ್ ಕಳುಹಿಸಲಾಗಿತ್ತು. ಆರೋಗ್ಯ ಸಚಿವಾಲಯದ ಕೋವಿಡ್ ಪ್ರೋಟೋಕಾಲ್ ಅನುಸಾರವಾಗಿ ಉಮ್ರಾ ತೀರ್ಥಯಾತ್ರೆ ನಡೆಸಲಾಗುವುದು. ಈ ವರ್ಷದ ಅಸಾಧಾರಣ ಹಜ್‌ನಿಂದ ಕಲಿತ ಪಾಠಗಳಿಗೆ ಅನುಗುಣವಾಗಿ ಮುಂದಿನ ಉಮ್ರಾ ಋತುವಿನ ಸಿದ್ಧತೆಗಳನ್ನು ಪ್ರಾರಂಭಿಸುವ ಯೋಜನೆಯಿದೆ ಎಂದು ಹಜ್ ವ್ಯವಹಾರಗಳ ಉಪ ಕಾರ್ಯದರ್ಶಿ ಡಾ.ಹುಸೈನ್ ಅಲ್-ಷರೀಫ್ ಹೇಳಿದರು.

error: Content is protected !!

Join the Group

Join WhatsApp Group