ಕಡಬ: ಯುವಮೋರ್ಚಾ ವತಿಯಿಂದ ಉಚಿತ ಆಯುಷ್ಮಾನ್‌ ಕಾರ್ಡ್‌ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಆ.27: ಭಾರತೀಯ ಜನತಾ ಪಾರ್ಟಿ, ಯುವಮೋರ್ಚಾ ಸುಳ್ಯ ಮಂಡಲ ಇದರ ವತಿಯಿಂದ ಕಡಬದಲ್ಲಿ ನಡೆಯುತ್ತಿರುವ ಉಚಿತ ಆಯುಷ್ಮಾನ್‌ ಕಾರ್ಡ್‌ ಅಭಿಯಾನದ ಸಭಾಕಾರ್ಯಕ್ರಮದ ಉದ್ಘಾಟನೆಯನ್ನು ಸುಳ್ಯ ಮಂಡಲ ಅಧ್ಯಕ್ಷ ಹರೀಶ್‌ ಕಂಜಿಪಿಲಿ ನೆರವೇರಿಸಿದರು. ಸಭಾಧ್ಯಕ್ಷತೆಯನ್ನು ಯುವ ಮೋರ್ಚಾದ ಮಂಡಲ ಅಧ್ಯಕ್ಷ ಶ್ರೀ ಕೃಷ್ಣ ಭಟ್‌ ಹೊಸಮಠ ವಹಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ದಕ್ಷಿಣ ಕನ್ನಡದ ಜಿಲ್ಲಾಧ್ಯಕ್ಷ ಗುರುದತ್‌ ನಾಯಕ್‌ ಪ್ರಾಸ್ತಾವಿಕ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕೃಷ್ಣ ಶೆಟ್ಟಿ ಕಡಬ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯರು, ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಮೇಶ್‌ ಭಟ್‌ ಕಲ್ಪುರೆ, ಸುಳ್ಯ ಮಂಡಲ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕೇರ್ಪಳ, ಕಡಬ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಗಿರೀಶ್‌ ಎ.ಪಿ.ಸುಳ್ಯ ತಾಲೂಕು ಗ್ರಾಮ ವಿಕಾಸ ಸಮಿತಿ ಸಂಯೋಜಕರು, ವಿನೋದ್‌ ಬೊಳ್ಮಲೆ ಉಪಸ್ಥಿತರಿದ್ದರು. ಶ್ರೀ ಕೃಷ್ಣ ಭಟ್‌ ಹೊಸಮಠ ಸ್ವಾಗತಿಸಿ, ಯುವ ಮೋರ್ಚಾದ ಉಪಾಧ್ಯಕ್ಷ ಮನುದೇವ್‌ ಪರಮಲೆ ವಂದನಾರ್ಪಣೆ ಮಾಡಿದರು. ಯುವ ಮೋರ್ಚಾದ ಕಾರ್ಯದರ್ಶಿ ಚೇತನ್‌ ನಾವೂರು ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Also Read  ಎಡನೀರು ಸ್ವಾಮೀಜಿ ಕಾರಿನ ಮೇಲೆ ದುಷ್ಕರ್ಮಿಗಳಿಂದ ದಾಳಿ- ಸಂಸದರ ಪತ್ರಕ್ಕೆ ತುರ್ತು ಸ್ಪಂದಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ ಕೇರಳ ಸಿಎಂ

 

 

 

error: Content is protected !!
Scroll to Top