ಪ್ರಿಯಕರನ ಮನೆಯ ಹತ್ತಿರ ಪ್ರಿಯತಮೆ ಆತ್ಮಹತ್ಯೆಗೆ ಶರಣು ➤ ಡೆತ್ ನೋಟ್‍ನಲ್ಲಿತ್ತು ಪ್ರಿಯಕರನ ಅಸಲಿ ಮುಖವಾಡ..!

(ನ್ಯೂಸ್ ಕಡಬ) newskadaba.com ಬ್ರಹ್ಮಾವರ. ಆ,27:  ಪ್ರೀತಿಸಿ ಕೈಕೊಟ್ಟ ಯುವಕನ ಮನೆಯ ಪರಿಸರದಲ್ಲೇ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಅನಿಷಾ ಮೃತ ದುರ್ದೈವಿ. ಕುಂದಾಪುರದ ಸಾಯಿಬ್ರಕಟ್ಟೆ ಸಮೀಪ ಇರುವ ಕಾಜರಹಳ್ಳಿ ಎಂಬ ಕುಗ್ರಾಮದಲ್ಲಿನ ಪ್ರತಿಭಾವಂತೆ ಯುವತಿ ಅನಿಷಾ. ಬಾಲ್ಯದಿಂದಲೂ ಕಲಿಕೆಯಲ್ಲಿ ಮುಂದಿದ್ದ ಅನಿಷಾ ಎಲ್ಲಾ ಸವಾಲುಗಳನ್ನು ಮೆಟ್ಟಿ ಎಂಬಿಎ ಮಾಡಿ ಊರಿಗೆ ಮಾದರಿಯಾಗಿದ್ದಳು.

ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಕೂಡ ಈಕೆಯ ತಾಯಿ ತನ್ನ ಐವರು ಮಕ್ಕಳಿಗೂ ಉತ್ತಮ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಆದರೆ, ಐದು ವರ್ಷಗಳ ಕೆಳಗೆ ಅನಿಷಾ ಜೀವನಕ್ಕೆ ಪ್ರವೇಶ ಕೊಟ್ಟ ಚೇತನ್ ಶೆಟ್ಟಿ, ಇದೀಗ ಅನಿಷಾ ಸಾವಿನ ಊರಿಗೆ ಹೋಗಲು ಕಾರಣನಾಗಿದ್ದಾನೆ ಎನ್ನಲಾಗಿದೆ.ಗೆಳತಿಯೊಬ್ಬಳ ಗೃಹಪ್ರವೇಶಕ್ಕೆ ಹೋಗಿಬರುತ್ತೇನೆಂದು ಹೊರಟಿದ್ದ ಅನಿಷಾ ಸಂಜೆಯಾದರು ಮನೆಗೆ ಬರಲಿಲ್ಲ. ಇದರ ಚಿಂತೆಯಲ್ಲಿದ್ದ ಮನೆಮಂದಿಗೆ ಅನಿಷಾಳ ಫೇಸ್​ಬುಕ್ ಫೋಸ್ಟ್​ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಚೇತನ್ ಒಬ್ಬ ಹೆಣ್ಣುಬಾಕ ಆತನನ್ನು ಯಾರು ನಂಬದಿರಿ ಎಂದು ಬರೆಯಲಾಗಿತ್ತು. ಅದನ್ನು ನೋಡಿದ ಅನಿಷಾ ಮನೆಯವರಿಗೆ ಆಘಾತವಾಯಿತು. ಕೂಡಲೇ ಮಗಳನ್ನು ಹುಡುಕಲು ಹೊರಟ ಹೆತ್ತವರಿಗೆ ಕಾಡಿನ ನಡುವೆ ಅನಿಷಾ ಶವವಾಗಿ ಪತ್ತೆಯಾಗಿದಳು.

Also Read  ಬಸ್ ನಿರ್ವಹಕನ ಶವ ಪತ್ತೆ: ಕೊಲೆ ಶಂಕೆ..!

ಸಾಯುವ ಮೊದಲು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟು ಯುವಕನ ಮನೆಯ ಬಳಿಯ ಪರಿಸರದಲ್ಲಿ ನೇಣಿಗೆ ಶರಣಾಗಿದ್ದಾಳೆ. ಡೇಟ್ ನೋಟ್ ನಲ್ಲಿ ತನ್ನ ಪ್ರಿಯತಮನ ಮುಖವಾಡವನ್ನ ಕಳಚಿದ್ದಾಳೆ. ಪರಿಪರಿಯಾಗಿ ಬೇಡಿದರೂ ಚೇತನ್ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದರೂ ಆತ ಕಡೆಗಣಿಸಿದ್ದಾನೆ. ಚೇತನ್ ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದಾನೆ ಎಂದು ತಿಳಿದು ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಆರೋಪಿ ಚೇತನ್ ಕುರಿತಾಗಿ ಮೋಸ ಹೋಗಿರುವ ಬಗ್ಗೆ ಬರೆದಿದ್ದಾಳೆ .ಆರೋಪಿ ಚೇತನ್ ಶೆಟ್ಟಿ ಮತ್ತು ಆತನ ತಂದೆ ಉಮಾನಾಥ ಶೆಟ್ಟಿ ಮೇಲೆ ಬ್ರಹ್ಮಾವರ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರಚೋದನೆಯ ದೂರು ದಾಖಲಾಗಿದೆ. ಇದೀಗ ಆರೋಪಿಗಳಿಬ್ಬರು ಊರು ಬಿಟ್ಟು ಪರಾರಿಯಾಗಿದ್ದಾರೆ.

Also Read  ಎನ್‌ಡಿಎ ಮೈತ್ರಿಕೂಟದಿಂದ ದೂರ ಉಳಿಯಲು ನಿರ್ಧಾರ - ಎಚ್.ಡಿ ದೇವೇಗೌಡ

 

error: Content is protected !!
Scroll to Top