ಕಲ್ಲುಗುಡ್ಡೆ: ಎರಡು ಗೋಣಿ ಅಡಿಕೆ ಕಳವು

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಆ.27: ನೂಜಿಬಾಳ್ತಿಲದ ಕಲ್ಲುಗುಡ್ಡೆ ಪೇಟೆಯ ಮನೆಯೊಂದರಿಂದ ಕಳೆದ ದಿನ ರಾತ್ರಿ ಅಪರಿಚಿತರು ಅಡಿಕೆಗೋಣಿ ಎಗರಿಸಿದ ಘಟನೆ ನಡೆದಿದೆ.

ಹಾಜೀ ಇಸ್ಮಾಯಿಲ್‌ ಎಂಬವರ ಮನೆಯಿಂದ 2 ಗೋಣಿ ಅಡಿಕೆ ಕಳವಾಗಿದ್ದು ಕಡಬ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ನೂಜಿಬಾಳ್ತಿಲ, ರೆಂಜಿಲಾಡಿ ಪ್ರದೇಶದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರು, ಕಲ್ಲುಗುಡ್ಡೆಗೂ ತಿರುಗಾಟ ನಡೆಸಿದ್ದಾರೆ. ಕಡಬ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರೂ ಪೊಲೀಸರ ಕಣ್ಣು ತಪ್ಪಿಸಿ ಕಳ್ಳರು ಕೈಚಲಕ ತೋರುತ್ತಿದ್ದು ಕಳ್ಳರನ್ನು ಮಟ್ಟ ಹಾಕಲು ಪೊಲೀಸರು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Also Read  ದಕ್ಷಿಣ ಕನ್ನಡದಲ್ಲಿ ಸದ್ಯದಲ್ಲೇ ಪ್ಲಾಸ್ಮಾ ಥೆರಪಿ ಆರಂಭ

 

error: Content is protected !!