ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಕಮಿಷನರ್ ಆಗಿ ಯುವ IAS ಅಧಿಕಾರಿ ಅಕ್ಷಯ್ ಶ್ರೀಧರ್ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು. ಆ,25:  ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಕಮಿಷನರ್ ಆಗಿ 2017ನೇ ಕರ್ನಾಟಕ ಕೇಡರ್ ನ,  ಐಎಎಸ್ ಅಧಿಕಾರಿ ಅಕ್ಷಯ್ ಶ್ರೀಧರ್  ನೇಮಕಗೊಂಡಿದ್ದಾರೆ. ಬೀದರ್ ಉಪವಿಭಾಗದ ಸಹಾಯಕ ಕಮಿಷನರ್ ಆಗಿದ್ದ ಅಕ್ಷಯ್ ಶ್ರೀಧರ್ , ರನ್ನು ಮಂಗಳೂರು ಪಾಲಿಕೆಯ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ.

ತಮಿಳುನಾಡಿನ ತಿರುಪುರದ ನಿವಾಸಿಯಾದ ಅಕ್ಷಯ್ ಶ್ರೀಧರ್  ಇಂಜಿನಿಯರಿಂಗ್ ಶಿಕ್ಷಣವನ್ನು ತಮಿಳಿನಾಡಿನಲ್ಲಿ ಪೂರೈಸಿ ಐಎಎಸ್ ಅಧಿಕಾರಿಯಾಗಿ ಕರ್ನಾಟಕದ ಕೇಡರ್ ಗೆ ಆಯ್ಕೆಗೊಂಡಿದ್ದರು. ಇನ್ನು, 2018 ರಲ್ಲಿ ಜಮ್ಮುನಿಂದ ದೆಹಲಿ ಮುಂಬೈ, ಊಟಿ ಮೈಸೂರು ಕೊಪ್ಪಳ ಮೂಲಕ 1000 ಕಿ. ಮೀ ಮ್ಯಾರಥಾನ್ ಓಟವನ್ನು ಪೂರ್ತಿಗೊಳಿಸಿದ ಕೀರ್ತಿ ಅಕ್ಷಿ ಶ್ರೀಧರ್ ಅವರಿಗಿದೆ.ಇದೀಗಾ ಇವರು ಮಂಗಳೂರು ಮಹಾನಗರ ಪಾಲಿಕೆಗೆ ನೂತನ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಬೀದರ್ ಉಪವಿಭಾಗದ ಸಹಾಯಕ ಕಮಿಷನರ್ ಆಗಿದ್ದ ಅಕ್ಷಯ್ ಶ್ರೀಧರ್  ರನ್ನು ಮಂಗಳೂರು ಪಾಲಿಕೆಯ ಕಮಿಷನರ್ ಆಗಿ ವರ್ಗಾವಣೆ ಮಾಡಲಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಇತ್ತೀಚೆಗೆ ವರ್ಗಾವಣೆಗೊಂಡಿದ್ದರು.

Also Read  ಶುದ್ಧತೆ ಪರೀಕ್ಷೆಯಲ್ಲಿ ವಿಫಲವಾದ ಬ್ರಾಂಡೆಡ್ ಜೇನು | ಅಸಲಿ ಜೇನು ಹೇಗಿರುತ್ತೆ ಗೊತ್ತೇ..?

error: Content is protected !!
Scroll to Top