ಜಗತ್ತಿನ ಅತಿ ವೇಗದ ಓಟಗಾರ ‘ಉಸೇನ್‌ ಬೋಲ್ಟ್’ ಅವರಿಗೆ ಕೊರೊನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಕಿಂಗ್ ಸ್ಟನ್. ಆ,25:  ಜಗತ್ತಿನ ಅತಿ ವೇಗದ ಓಟಗಾರ ಜಮೈಕಾದ ಉಸೇನ್‌ ಬೋಲ್ಟ್ ಅವರಿಗೆ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಸೋಮವಾರ ಮಧ್ಯಾಹ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದ ಬೋಲ್ಟ್‌, ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಸುರಕ್ಷಿತವಾಗಿರಲು ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿರುವುದಾಗಿ ಹೇಳಿಕೊಂಡಿದ್ದರು.

 

ಆದರೆ, ಅವರ ವರದಿ ಪಾಸಿಟಿವ್‌ ಬಂದಿರುವುದಾಗಿ ಜಮೈಕಾದ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ. ಶನಿವಾರ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಬೋಲ್ಟ್,‌ ಮರುದಿನವೇ ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಸುರಕ್ಷಿತವಾಗಿರಲು ನಾನು ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿದ್ದೇನೆ. ‘ಸ್ಟೇ ಸೇಫ್‌ ಮೈ ಪೀಪಲ್‌’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಬೋಲ್ಟ್‌ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

Also Read  ಮಹಿಳೆಯರಿಗೆ ಕಿರುಕುಳ ಉಂಟಾದರೆ ಜಿಲ್ಲಾ ಮಟ್ಟದ ಸ್ಥಳೀಯ ದೂರು ಸಮಿತಿಗೆ ದೂರು ನೀಡಿ ➤ ಶ್ಯಾಮಲಾ ಎಸ್. ಕುಂದರ್ 

 

 

error: Content is protected !!
Scroll to Top