(ನ್ಯೂಸ್ ಕಡಬ) newskadaba.com ಕಾರ್ಕಳ. ಆ,25: ಕಾರ್ಕಳದ ಕುಕ್ಕುಂದೂರು ಗ್ರಾಮದ ಹಾರ್ಜೆಡ್ಡು ಎಂಬಲ್ಲಿ ಮಾರುತಿ ಇಂಡಸ್ಟ್ರೀಸ್ ಗೆ ಕಳೆದ ತಡರಾತ್ರಿ ಸುಮಾರು 1 ಗಂಟೆ ವೇಳೆಗೆ ಬೆಂಕಿ ತಗುಲಿದ್ದು ಅಪಾರ ಪ್ರಮಾಣದ ಹಾನಿಯಾಗಿ ನಷ್ಟವುಂಟಾಗಿದೆ.
ಪ್ರಕಾಶ್ ಪುತ್ರನ್ ಎಂಬುವರಿಗೆ ಸೇರಿದ ಮಾರುತಿ ಇಂಡಸ್ಟ್ರೀಸ್ ಇದು ಗೇರುಬೀಜದ ಎಣ್ಣೆ ತೆಗೆಯುವ ಕಂಪನಿಯಾಗಿದ್ದು, ಇದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಪರಿಣಾಮ ಫ್ಯಾಕ್ಟರಿ ಬೆಂಕಿಯ ಕೆನ್ನಾಲಿಗೆ ಆಹುತಿಯಾಗಿದೆ. ಇನ್ನು ಎರಡು ಲಾರಿಗಳು ಭಾಗಶ: ಭಸ್ಮವಾಗಿದೆ. ಸರಿ ಸುಮಾರು ಅಂದಾಜು 1.5 ಕೋಟಿ ರೂ ಮೌಲ್ಯದ ನಷ್ಟ ಉಂಟಾಗಿರುವ ಬಗ್ಗೆ ತಿಳಿದು ಬಂದಿದೆ.