ಕಡಬ: ಪೆರಾಬೆ ಒತ್ತುವರಿ ಸರಕಾರಿ ಭೂಮಿ ತೆರವುಗೊಳಿಸುವಂತೆ ದಲಿತ್ ಸೇವಾ ಸಮಿತಿಯಿಂದ ಆಗ್ರಹ

(ನ್ಯೂಸ್ ಕಡಬ) ಕಡಬ, ಆ. 24.  ಪೆರಾಬೆಯಲ್ಲಿ ಬಾಲಕೃಷ್ಣ ಪೂಜಾರಿ ಎಂಬುವವರು ಒತ್ತುವರಿ ಮಾಡಿಕೊಂಡ ಸರಕಾರಿ ಜಾಗವನ್ನು ಕೂಡಲೇ ತೆರವುಗೊಳಿಸಬೇಕು ಎಂದು ಆಗ್ರಹಿಸಿ ದಲಿತ್ ಸೇವಾ ಸಮಿತಿಯ ವತಿಯಿಂದ ಕಡಬ ತಹಶೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಯಿತು.

ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಈಗಾಗಲೇ ಈ ಭೂಮಿಗೆ ಸಂಬಂಧಿಸಿದಂತೆ ಎ.ಸಿ.ಯವರು ಯಥಾಸ್ಥಿತಿಯ ಆದೇಶ ನೀಡಿದ್ದಾರಾದರೂ ಇಲ್ಲಿ ಆದೇಶ ಪಾಲನೆಯಾಗುತ್ತಿಲ್ಲ,. ಒಂದು ವಾರದ ಒಳಗೆ ಈ ಸರಕಾರಿ ಭೂಮಿಯನ್ನು ಕಂದಾಯ ಇಲಾಖೆಯ ಸ್ವಾಧೀನಕ್ಕೆ ಪಡೆದುಕೊಳ್ಳದಿದ್ದರೆ ಉಗ್ರ ಹೋರಾಟವನ್ನೇ ಮಾಡಲಾಗುವುದು, ಬಳಿಕ ನಡೆಯುವಂತಹ ಯಾವುದೇ ಅಹಿತಕರ ಘಟನೆಗಳಿಗೆ ಕಡಬ ತಹಶೀಲ್ದಾರ್ ಹೊಣೆಯಾಗಿರುತ್ತಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅಣ್ಣಿ ಎಳ್ತಿಮಾರ್, ಧನಂಜಯ ಬಲ್ನಾಡು, ಕೇಶವ ಕುಪ್ಲಾಜೆ, ಬಿ.ಕೆ.ಅಣ್ಣಪ್ಪ, ಗೋಪಾಲ ನೇರಳಕಟ್ಟೆ, ಕೆ.ಪಿ. ಆನಂದ, ಮನೋಹರ್ ಕೋಡಿಜಾಲು, ಮಣಿ ರೆಂಜರ್ ಮೊದಲಾದವರು ಉಪಸ್ಥಿತರಿದ್ದರು.

Also Read  `ಯಶಸ್ವಿನಿ ಯೋಜನೆ' ಫಲಾನುಭವಿಗಳಿಗೆ ಗುಡ್ ನ್ಯೂಸ್ !     ➤ ಚಿಕಿತ್ಸಾ ದರ ಹೆಚ್ಚಳ; ರಾಜ್ಯ ಸರ್ಕಾರ

error: Content is protected !!
Scroll to Top