ಕಿರಿಮಂಜೇಶ್ವರ ಕೊಡೆರಿಯಲ್ಲಿ ದೋಣಿ ದುರಂತ ➤ ಮೃತಪಟ್ಟ 4 ಮೀನುಗಾರರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಸಿ.ಎಂ

(ನ್ಯೂಸ್ ಕಡಬ) newskadaba.com ಬೈಂದೂರು. ಆ,24:  ಕಿರಿಮಂಜೇಶ್ವರ ಕೊಡೆರಿಯಲ್ಲಿ ದೋಣಿ ದುರಂತದಲ್ಲಿ ಮೃತಪಟ್ಟ ನಾಲ್ಕು ಮೀನುಗಾರರ ಕುಟುಂಬಗಳಿಗೆ ತಲಾ 6 ಲಕ್ಷ ರೂ.ಗಳ ಪರಿಹಾರವನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದಾರೆ.

 

 

ಪರಿಹಾರದ ಆದೇಶದ ಪ್ರತಿಯನ್ನು ಸಂತ್ರಸ್ತರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ತಿಳಿಸಿದ್ದಾರೆ. ಇಂದು ಸಚಿವರು ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ ಅವರೊಂದಿಗೆ ಸಂತ್ರಸ್ತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಆಗಸ್ಟ್ 16 ರಂದು ಬೃಹತ್ ಅಲೆಗಳು ದೋಣಿಯನ್ನು ಮುಳುಗಿಸಿದ ನಂತರ ಮಂಜುನಾಥ್ ಖಾರ್ವಿ, ಲಕ್ಷ್ಮಣ್ ಖಾರ್ವಿ, ಶೇಖರ್ ಖಾರ್ವಿ ಮತ್ತು ನಾಗರಾಜ್ ಖಾರ್ವಿ ಎಂಬ ನಾಲ್ವರು ನಾಪತ್ತೆಯಾಗಿದ್ದು ಸುಮಾರು ಎರಡು ದಿನಗಳ ನಂತರ ಎಲ್ಲರ ಶವಗಳೂ ಪತ್ತೆಯಾಗಿತ್ತು.

Also Read  ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಗುದ್ದಿದ ಕಾರು ➤ ಚಾಲಕ ಸ್ಥಳದಲ್ಲೇ ಮೃತ್ಯು

 

error: Content is protected !!
Scroll to Top