ಬೆಂಗಳೂರಿನಲ್ಲಿ ಗುಂಡಿನ ದಾಳಿ ➤ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್

(ನ್ಯೂಸ್ ಕಡಬ) newskadaba.com ಬೆಂಗಳೂರು. ,23: ಗಣೇಶ ಹಬ್ಬದ ದಿನವೇ ಬೆಂಗಳೂರಿನಲ್ಲಿ ಗುಂಡಿನ ಸದ್ದು ಕೇಳಿಸಿದೆ. ನಗರದ ಕೆ. ಆರ್ ಪುರದಲ್ಲಿ ಶನಿವಾರ ರಾತ್ರಿ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಫೈರಿಂಗ್ ನಡೆಸಲಾಗಿದೆ..

ರಿಯಲ್ ಎಸ್ಟೇಟ್ ಏಜೆಂಟ್ ಆಟೋ ಬಾಬು ಎನ್ನುವವರ ಮೇಲೆ ಶನಿವಾರ ರಾತ್ರಿ 10 ಘಂಟೆಯ  ಸುಮಾರಿಗೆ ಗುಂಡಿನ ದಾಳಿ ನಡೆಸಲಾಗಿದೆ. ಗಾಯಾಳು ಆಟೋ ಬಾಬುಗೆ ಗಂಭೀರ ಗಾಯವಾಗಿದ್ದು, ಅಸ್ಪತ್ರೆಗೆ ದಾಖಲು ಮಾಡಲಾಯಿತು. ಕೆ ಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ದರ್ಗಾ ರಸ್ತೆಯಲ್ಲಿರುವ ಆಟೋ ಬಾಬು ಕಚೇರಿಯಲ್ಲಿ ದಾಳಿ ಮಾಡಲಾಯಿತು. ಇಬ್ಬರು ಅಪರಿಚಿತ ವ್ಯಕ್ತಿಗಳು ತಡರಾತ್ರಿ 10 ಗಂಟೆಯ ಸುಮಾರಿಗೆ ಆಟೋ ಬಾಬು ಕಚೇರಿಯಲ್ಲಿ ಇದ್ದ ವೇಳೆ ಗುಂಡು ಹಾರಿಸಿದ್ದಾರೆ ಎಂದು ವರದಿಯಾಗಿದೆ.

Also Read  ಮಹಾರಾಷ್ಟ್ರ: ಕಮರಿಗೆ ಉರುಳಿ ಬಿದ್ದ ಬಸ್‌ ➤ ಐವರ ದುರ್ಮರಣ, 35ಕ್ಕೂ ಹೆಚ್ಚು ಮಂದಿಗೆ ಗಾಯ

 

error: Content is protected !!
Scroll to Top