12 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ➤ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್. ,23:   ಮಹಾಮಾರಿ ಕೊರೋನಾ ಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿಯೂ ನಮ್ಮ ಆರೋಗ್ಯದ ಕಾಳಜಿ ವಹಿಸುವುದು ಅತಿ ಅಗತ್ಯವಾಗಿದೆ. 12 ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಹೊರಡಿಸಿದೆ.ಮಕ್ಕಳು ಹೇಗೆ ಕೊರೊನಾವೈರಸ್‌ಗೆ ವಾಹಕರಾಗುತ್ತಾರೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದೇ ಇದ್ದರೂ ದೊಡ್ಡವರು ಹೇಗೆ ವೈರಸ್‌ಗೆ ತುತ್ತಾಗುತ್ತಾರೋ ಮಕ್ಕಳು ಕೂಡ ಹಾಗೆಯೇ ತುತ್ತಾಗುತ್ತಾರೆ, ಹೀಗಾಗಿ 12 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಲೇಬೇಕು ಎಂದು ಹೇಳಿದೆ.

Also Read  ನಿಮ್ಮ ಮನೆಯಲ್ಲಿ ಗ್ಯಾಸ್ ಗೀಝರ್ ಇದ್ದರೆ ಈ ಸುದ್ದಿ ಓದಿ ನೋಡಿ ➤ ಬಂಟ್ವಾಳ: ಸ್ನಾನಕ್ಕೆ ತೆರಳಿದ ಯುವಕ ಉಸಿರುಗಟ್ಟಿ ಮೃತ್ಯು

 

ಅಮೆರಿಕದಲ್ಲಿ ಪ್ರಕರಣಗಳ ಸಂಖ್ಯೆ 58, 41,428 ಆಗಿದ್ದು, 18,01,74 ಮಂದಿ ಸಾವಿಗೀಡಾಗಿದ್ದಾರೆ. ಅದೇ ವೇಳೆ ಬ್ರೆಜಿಲ್‌ನಲ್ಲಿ 35,82,698 ಮಂದಿಗೆ ಸೋಂಕು ತಗುಲಿದ್ದು, 1,14,277 ಮಂದಿ ಮೃತಪಟ್ಟಿದ್ದಾರೆ.ಅತಿ ಹೆಚ್ಚು ಸೋಂಕಿತರಿರುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಇಲ್ಲಿ ಸೋಂಕಿತರ ಸಂಖ್ಯೆ 30,43,436 ಆಗಿದೆ. ಸಾವೀಗೀಡಾದವರ ಸಂಖ್ಯೆ 56,846 ಆಗಿದೆ. 2021ರ ಆರಂಭದಲ್ಲಿ ಕೊರೊನಾವೈರಸ್ ಲಸಿಕೆ ಸಿದ್ಧವಾಗಲಿದೆ ಎಂದು ಟುನೇಶಿಯಾ ಹೇಳಿದೆ.

 

error: Content is protected !!
Scroll to Top