(ನ್ಯೂಸ್ ಕಡಬ) newskadaba.com ಕಡಬ,ಸೆ.15, ಪದವಿ ಪೂರ್ವ ಶಿಕ್ಷಣ ಇಲಾಖಾ ವತಿಯಿಂದ ಮೂಡಬಿದ್ರೆಯ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಖೋಖೋ ಪಂದ್ಯಾಟದಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ತಂಡದಲ್ಲಿ ಕೀರ್ತಿಕಾ, ಶಮಾ, ಅಕ್ಷತಾ ಪಿ ಸಿ, ಧನುಶ್ರೀ, , ಲತಾ, ಚೇತನಾ, ಪವಿತ್ರಾ, ಕಾವ್ಯಶ್ರೀ, ವೇದಾವತಿ, ಚೇತನಾ ಎಸ್, ಯಶ, ದೀಕ್ಷಾ, ಪ್ರನಿತಾ, ಆಶಿತಾ, ಕೀರ್ತನಾ, ಭಾಗವಹಿಸಿದ್ದರು. ಈ ಪೈಕಿ ಅಕ್ಷತಾ ಪಿ ಸಿ, ಚೇತನಾ ಎಸ್, ಲತಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ರಾಧಕೃಷ್ಣ ಎಂ ತರಭೇತಿ ನೀಡಿದ್ದಾರೆ.