(ನ್ಯೂಸ್ ಕಡಬ) newskadaba.com ಮಂಗಳೂರು, ಆ,12: ಹಿರಿಯ ದೈವಾರಾಧಕ ಸುಧೀರ್ಘ ಕಾಲ ದೈವಾರಾಧನೆಯ ಕ್ಷೇತ್ರದಲ್ಲಿ ಗಡಿಕಾರರಾಗಿ ಸೇವೆ ಸಲ್ಲಿಸಿದ, ಪಂಜ ಕೊಯ್ಕುಡೆ ಶ್ರೀ ಹರಿಪಾದೆ ಜಾರಂದಾಯ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರಾದ ಪಂಜ ನಲ್ಯ ಗುತ್ತಿನಾರ್ ಕುಡುಂಬೂರು ಭೋಜ ಶೆಟ್ಟಿ (86) ರವರು ಇಂದು ಬೆಳಿಗ್ಗೆ ಕುಡುಂಬೂರಿನ ಸ್ವಗ್ರಹದಲ್ಲಿ ನಿಧನರಾದರು.
ಸಮಾಜಸೇವೆಯಲ್ಲಿ ಸದಾ ಮುಂಚೂಣಿಯಲ್ಲಿ ಇದ್ದ ಇವರು ಕೊಡುಗೆಯಲ್ಲಿ ದಾನಿಯಾಗಿದ್ದರು. ಮಂಗಳೂರಿನ ಬೈಕಂಪಾಡಿ ಕುಡುಂಬೂರು ಕೈಗಾರಿಕ ವಲಯ ಸ್ಥಾಪನೆಯಾಗಿದ್ದಾಗ ಸುಮಾರು 100 ಕ್ಕೂ ಹೆಚ್ಚು ಮೂಲ ನಿವಾಸಿಗಳ ವಸತಿ ಕಾಲೋನಿ ನಿರ್ಮಿಸಲು ಬಹಳಷ್ಟು ಹೋರಾಟ ನಡೆಸಿದ್ದರು. ಬೈಕಂಪಾಡಿ ಕುಡುಂಬೂರಿನ ಕೈಗಾರಿಕ ವಲಯ ಸ್ಥಾಪನೆಯಾಗುವ ಮುಂಚೆ ಪ್ರಗತಿಪರ ಕೃಷಿಕರಾಗಿದ್ದ ಇವರು ಕಂಬಳದ ಕೋಣಗಳ ಯಜಮಾನ ಆಗಿದ್ದರು. ಪುರಾಣ ಪ್ರಸಿದ್ಧ ಪಂಜ ಕೊಯ್ಕುಡೆ ಶ್ರೀ ಹರಿಪಾದೆ, ಜಾರಂದಾಯ ದೈವಸ್ಥಾನದ ಅನುವಂಶೀಯ ಆಡಳಿತ ಮುಕ್ತೇಸರರಾದ ನಂತರ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿಗೊಳಿಸಿ ಸರ್ವ ಜನರ ಪ್ರೀತಿಗೆ ಪಾತ್ರರಾಗಿದ್ದರು. ಮೃತರು ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.