(ನ್ಯೂಸ್ ಕಡಬ) newskadaba.com.ಪೆರಾಜೆ ,ಆ.11: ಕಳ್ಳಭಟ್ಟಿ ತಯಾರಿಸಿ ಕೇಸಿಗೊಳಗಾಗುತ್ತಿದ್ದ ಮನೆಗಳಿಗೆ ಅಬಕಾರಿ ಅಧಿಕಾರಿಗಳು ಭೇಟಿ ನೀಡಿ ಪುನಃ ಕಳ್ಳಭಟ್ಟಿ ತಯಾರಿಸದಂತೆ ಜಾಗೃತಿ ಮತ್ತು ಎಚ್ಚರಿಕೆ ನೀಡುವ ಕಾರ್ಯದಲ್ಲಿ ತೊಡಗಿರುವುದು ಪೆರಾಜೆ ಗ್ರಾಮದಲ್ಲಿ ಕಂಡುಬಂದಿದೆ.
ಈ ಪ್ರದೇಶದಲ್ಲಿ ಕಳ್ಳಭಟ್ಟಿ ತಯಾರಿಸಿ ಸಿಕ್ಕಿಬಿದ್ದಿದ್ದಂತಹ ಮನೆಗಳನ್ನು ಗುರುತಿಸಿ ಮುಂದೆ ಕಳ್ಳಭಟ್ಟಿ ತಯಾರಿಸದಂತೆ ಎಚ್ಚರಿಕೆ ನೀಡಿದರು. ಇಲ್ಲಿನ ಹಲವು ಮನೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಕಳ್ಳಭಟ್ಟಿಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಹೇಳಿದರು .ಅಬಕಾರಿ ಅಧಿಕಾರಿಗಳಾದ ಮಂಗಳೂರು ವಿಭಾಗದ ಸುಪರಿಂಟೆಂಡೆಂಟ್ ವಿನೋದ್ ಕುಮಾರ್, ಡಿಸ್ಟ್ರಿಕ್ಟ್ ಸ್ಕ್ವಾಡ್ ಇನ್‌ಸ್ಪೆಕ್ಟರ್ ಲಕ್ಷ್ಮೀಶ್, ಮಡಿಕೇರಿ ರೇಂಜ್ ಇನ್‌ಸ್ಪೆಕ್ಟರ್ ಆರ್.ಎಂ.ಚೈತ್ರಾ,ಮಡಿಕೇರಿ ರೇಂಜ್ ಸಬ್‌ಇನ್‌ಸ್ಪೆಕ್ಟರ್ ಲೋಕೇಶ್ ಬಿ.ಎಸ್ ಕಾರ್ಯಚರಣೆ ಮಾಡಿದ ಅಧಿಕಾರಿ ವರ್ಗವಾಗಿದೆ.