ಪಂಜ ಸೇತುವೆಯ ಮೇಲಿದ್ದ ಕಸಕಡ್ಡಿಗಳ ತೆರವು

(ನ್ಯೂಸ್ ಕಡಬ) newskadaba.com ಪಂಜ, ಆ.09: ಕರಾವಳಿ ಹಲವು ಭಾಗಗಳಲ್ಲಿ ಈ ಬಾರಿಯ ಮಳೆಗೆ ರಸ್ತೆಗಳೂ ಸೇರಿದಂತೆ ಅಪಾರ ಹಾನಿ ಉಂಟಾಗಿದ್ದು, ಪಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಡಬೈಲ್ ಸಮೀಪದ ಬೊಳ್ಮಲೆಯಿಂದ ಕೂತ್ಕುಂಜ ಗ್ರಾಮದ ಬಸ್ತಿಕಾಡುವಿಗೆ ಸಂಪರ್ಕಿಸುವ ಸೇತುವೆ ಮೇಲೆ ಮಳೆನೀರಿನಿಂದ ಬಂದ ಕಸಕಡ್ಡಿಗಳು, ಮರದ ದಿಮ್ಮಿಗಳನ್ನು ಇಂದು ತೆರವುಗೊಳಿಸಲಾಗಿದೆ.


ಸೇತುವೆಯ ಮೇಲಿದ್ದ ಮರದ ದಿಮ್ಮಿಗಳಿಂದಾಗಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಪಂಜ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ.ದೇವಿ ಪ್ರಸಾದ್ ಕಾನತ್ತೂರು ನೇತೃತ್ವದಲ್ಲಿ ಜೆಸಿಬಿ ಮೂಕಾಂತರ ತೆರವು ಕಾರ್ಯಚರಣೆ ನಡೆದಿದೆ.

Also Read  ಕಡಬ: ಅಕ್ರಮ‌ ಜಾನುವಾರು ಸಾಗಾಟ ಪತ್ತೆ ➤ ಜಾನುವಾರುಗಳೊಂದಿಗೆ ಪಿಕಪ್ ವಾಹನ ವಶ, ಆರೋಪಿಯ ಬಂಧನ

error: Content is protected !!
Scroll to Top