(ನ್ಯೂಸ್ ಕಡಬ) newskadaba.com ಕಡಬ: ಆ.09,. ನಿರಂತರ ಮಳೆಯಿಂದಾಗಿ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯ ಸೋಮಶೇಖರ ಅವರ ಮನೆಯ ಗೋಡೆ ಕುಸಿದು ನಷ್ಟ ಸಂಭವಿಸಿದ ಘಟನೆ ಶನಿವಾರ ನಡೆದಿದೆ.
ಬಾರೀ ಮಳೆ ಸುರಿಯುತ್ತಿರುವುದರಿಂದ ಮನೆಯ ಸುತ್ತಲಿನ ಗೋಡೆಗಳೆಲ್ಲ ನೆನೆದು ಕುಸಿದು ಬಿದ್ದಿದೆ. ಆದರೆ ಕುಸಿತದ ಶಬ್ದಕ್ಕೆ ಮನೆ ಮಂದಿ ಹೊರಗಡೆ ಬಂದಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.