ಸುದ್ದಿ ಬಿಡುಗಡೆ ಹಿರಿಯ ವರದಿಗಾರ ನಾರಾಯಣ ನಾಯ್ಕ ಹೃದಯಾಘಾತಕ್ಕೆ ಬಲಿ..!!!

(ನ್ಯೂಸ್ ಕಡಬ) newskadaba.com ಪುತ್ತೂರು: ಆ.09,.ಇಲ್ಲಿನ ಪ್ರಸಿದ್ಧ ಸುದ್ದಿ ಬಿಡುಗಡೆ ಪತ್ರಿಕೆಯ ಹಿರಿಯ ವರದಿಗಾರ ನಾರಾಯಣ ನಾಯ್ಕ (48ವ.) ಅವರು  ಕ್ಕೀಡಾಗಿ ಶನಿವಾರ ರಾತ್ರಿ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ

ಕುರಿಯ ಗ್ರಾಮದ ಅಮ್ಮುಂಜೆಯ ನಾರಾಯಣ ಅವರು ಪುತ್ತೂರು ಸುದ್ದಿ ಬಿಡುಗಡೆಯ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿದ್ದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ರಾತ್ರಿ ವೇಳೆ ಕೊನೆಯುಸಿರೆಳೆದಿದ್ದಾರೆ.

ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಕಳೆದ ಹಲವು ವರ್ಷಗಳಿಂದ ವರದಿಗಾರರಾಗಿ ಕೆಲಸ ಮಾಡಿಕೊಂಡು ಚಿರಪರಿಚಿತರಾಗಿದ್ದ ನಾರಾಯಣ ಅವರು ಮರಾಠಿ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಪಾಲಿಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ, ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಪ್ರಚಾರ ಸಮಿತಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.ಮೃತರು ಪತ್ನಿ ಪೂರ್ಣಿಮಾ, ಪುತ್ರ ಪ್ರಜ್ವಲ್ ಅವರನ್ನು ಅಗಲಿದ್ದಾರೆ. ನಾರಾಯಣ ನಾಯ್ಕರ ಅಕಾಲಿಕ ನಿಧನಕ್ಕೆ ಪತ್ರಕರ್ತ ಸಮೂಹ ಕಂಬನಿ ಮಿಡಿದಿದೆ.

Also Read  ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ        

 

error: Content is protected !!
Scroll to Top