ಕೊರೊನಾಗೆ ಸೆಡ್ಡು ಹೊಡೆಯುತ್ತಿದ್ದಾರೆ ಜನ➤ ದ.ಕ ಜಿಲ್ಲೆಯಲ್ಲಿ ಒಂದೇ ದಿನ 183 ಮಂದಿ ಚೇತರಿಸಿ ಆಸ್ಪತ್ರೆಯಿಂದ ಬಿಡುಗಡೆ

(ನ್ಯೂಸ್ ಕಡಬ) newskadaba.com ಕಡಬ, ಆ.09: ಮಂಗಳೂರು: ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಅದರಿಂದ ಚೇತರಿಕೆ ಕಾಣುವವರ ಸಂಖ್ಯೆಯು ಇದೀಗ ಏರಿಕೆ ಕಾಣುತ್ತಿದೆ. ದ.ಕ ಜಿಲ್ಲೆಯಲ್ಲಿ ಶನಿವಾರ 194 ಕೋವಿಡ್ ಪಾಸಿಟಿವ್ ಪ್ರಕರಣ ಹಾಗೂ 6 ಸಾವಿನ ಪ್ರಕರಣ ವರದಿಯಾತ್ತು.ಹಾಗೆ  ಒಂದೇ ದಿನ 183 ಮಂದಿ ಕರೊನಾದಿಂದ ಚೇತರಿಸಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿರುವುದು ವರದಿಯಾಗಿದೆ.

ಶನಿವಾರದಂದು ಮಂಗಳೂರಿನ 129, ಬಂಟ್ವಾಳದ 15, ಬೆಳ್ತಂಗಡಿ ಹಾಗೂ ಪುತ್ತೂರಿನ ತಲಾ 16, ಸುಳ್ಯದ 7, ಹೊರಜಿಲ್ಲೆಗಳ 11 ಮಂದಿಗೆ ಕರೊನಾ ಸೋಂಕು ತಗುಲಿದೆ. 98 ಮಂದಿ ಐಎಲ್ಐ ಲಕ್ಷಣ ಹೊಂದಿದ್ದರೆ 12 ಮಂದಿಗೆ ತೀವ್ರ ಉಸಿರಾಟದ ತೊಂದರೆ ಬಾಧಿಸಿತ್ತು. 15 ಮಂದಿಗೆ ನೇರ ಪ್ರಾಥಮಿಕ ಸಂಪರ್ಕದಿಂದ ಕೋವಿಡ್ ಬಾಧಿಸಿದ್ದರೆ 69 ಮಂದಿಯ ಸೋಂಕು ಮೂಲ ನಿಗೂಢವಾಗಿದೆ.

Also Read  5, 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ➤ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ

ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ 7075 ತಲಪಿದ್ದರೆ ಅದರಲ್ಲಿ ಸಕ್ರಿಯ ಪ್ರಕರಣ 3374. 3487 ಮಂದಿ ಒಟ್ಟು ಬಿಡುಗಡೆಯಾದವರು. ಮೃತರಾದವರ ಸಂಖ್ಯೆ 214ಕ್ಕೇರಿದೆ.

error: Content is protected !!
Scroll to Top