ಭಾರತದಂತೆ ದಿಟ್ಟ ಹೆಜ್ಜೆಯನ್ನಿಟ್ಟ ಅಮೇರಿಕಾ➤ ಟಿಕ್‌ಟಾಕ್‌‌, ವಿಚಾಟ್ ಅಮೇರಿಕಾದಲ್ಲೂ ಬ್ಯಾನ್

(ನ್ಯೂಸ್ ಕಡಬ) newskadaba.com.ವಾಷಿಂಗ್ಟನ್,ಆ.7: ಅಮೇರಿಕಾವೂ ಭಾರತದಂತೆ ದಿಟ್ಟವಾಗಿ ವಿಶ್ವದಲ್ಲೇ ಹೆಚ್ಚು ಜನಪ್ರಿಯವಾಗಿದ್ದ ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್‌ಟಾಕ್ ಮತ್ತು ವಿಚಾಟ್‌ ನಿಂದ ದೂರ ಉಳಿಯುವಂತ ಯೋಚನೆಗೆ ಕೈ ಹಾಕಿದೆ.ಇದರ ಕಾರ್ಯಕಾರಿ ಆದೇಶಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಮುಂದಿನ 45 ದಿನಗಳಲ್ಲಿ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.


ಈ ಆದೇಶದಲ್ಲಿ ಚೀನಾ ಮಾಲೀಕತ್ವದ ಟಿಕ್‌ಟಾಕ್ ಮತ್ತು ಮೆಸೆಂಜರ್ ಅಪ್ಲಿಕೇಶನ್ ವಿಚಾಟ್ ಬ್ಯಾನ್‌ ಮಾಡಲಾಗಿದೆ ಎಂದು ತಿಳಿಸಿದೆ. “ನಮ್ಮ ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಸೋಷಿಯಲ್ ಮೀಡಿಯಾಗಳ ವಿರುದ್ಧ ಹದ್ದಿನ ಕಣ್ಣಿಡುವುದು ಮುಖ್ಯ. ಟಿಕ್‌ಟಾಕ್ ಮಾಲೀಕರ ವಿರುದ್ಧ ಆಕ್ರಮಣಕಾರಿ ಕ್ರಮ ತೆಗೆದುಕೊಳ್ಳಬೇಕು. ಇನ್ನು ವಿಚಾಟ್ ಸ್ವಯಂಚಾಲಿತವಾಗಿ ತನ್ನ ಬಳಕೆದಾರರಿಂದ ಹೆಚ್ಚಿನ ಮಾಹಿತಿಯನ್ನು ಸೆರೆಹಿಡಿಯುತ್ತದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಡುಗಿದ್ದಾರೆ.

Also Read  ಅಮೇರಿಕಾದಲ್ಲಿ ಸಣ್ಣ ವಿಮಾನ ಪತನ ➤ ಭಾರತೀಯ ಮೂಲದ ಮಹಿಳೆ ಮೃತ್ಯು

error: Content is protected !!
Scroll to Top