(ನ್ಯೂಸ್ ಕಡಬ) newskadaba.com ಕಡಬ, ಆ.05: ಕೋಟ್ಯಾಂತರ ಭಾರತೀಯರ ಕನಸಾಗಿರುವ ಅಯೋಧ್ಯೆ ರಾಮ ಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ ಆರಂಭವಾಗಿದ್ದು, ದೇಶದ ಲಕ್ಷಾಂತರ ರಾಮ ಭಕ್ತರ ಐದು ದಶಕಗಳ ಕನಸು ನನಸಾಗುವ ಶುಭದಿನ ಇದೀಗ ಬಂದಿದೆ.
ಕಡಬ ತಾಲೂಕಿನ ಕೊಂಬಾರಿನಲ್ಲಿ ‘ಅಯೋಧ್ಯೆದಾರ್’ ಎಂದೇ ಗೌರವಪೂರ್ವಕವಾಗಿ ಎಲ್ಲರಿಂದಲೂ ಕರೆಯಲ್ಪಡುತ್ತಿದ್ದವರು ಶ್ರೀಯುತ ಮಾಯಿಲಪ್ಪ. 1990 ರಲ್ಲಿ ಆಯೋಧ್ಯೆಗೆ ತೆರಳಿ ರಾಮ ಮಂದಿರ ಕನಸು ಕಂಡ ರಾಮ ಭಕ್ತ ಕೊಂಬಾರು ಗದ್ದೆ ಶ್ರೀ ಮಾಯಿಲಪ್ಪ ಗೌಡರು. ಇವರು ಈಗ ರಾಮ ಮಂದಿರದ ಅಮೃತ ಘಳಿಗೆಗೆ ಸಂತಸ ಪಡುತ್ತಿದ್ದಾರೆ. ಹಾಗೂ ಕಡಬದ ಐತ್ತೂರು ಗ್ರಾಮದ ಅತ್ಯಡ್ಕ ಶ್ರೀ ಬಾಲಕೃಷ್ಣ ಶೆಟ್ಟಿರವರು 1992ನೇ ಡಿಸೆಂಬರ್ 6ರಂದು ಕರಸೇವೆಗಾಗಿ ಬಲಿದಾನಕ್ಕೂ ಸಿದ್ದ ಎಂದು ಹೊರಟವರಲ್ಲಿ ಒಬ್ಬರು. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಭೂಮಿ ಪೂಜೆಯ ಈ ಐತಿಹಾಸಿಕ ಕ್ಷಣದಲ್ಲಿ ಶ್ರೀಯುತ ಕೊಂಬಾರುಗದ್ದೆ ಶ್ರೀಯುತ ಮಾಯಿಲಪ್ಪ ಗೌಡರ ಹಾಗೂ ಶ್ರೀಯುತ ಬಾಲಕೃಷ್ಣ ಶೆಟ್ಟಿಯಂತಹ ಅನೇಕ ರಾಮಭಕ್ತರ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರದ ನಿರ್ಮಾಣವಾಗುತ್ತಿದೆ.ಇವರ ಸೇವೆಯು ಅಪಾರವಾದದ್ದು. ಅಲ್ಲದೆ ಕಡಬ ತಾಲೂಕಿಗೆ ಇದೊಂದು ಹೆಮ್ಮೆಯ ವಿಚಾರ.