ಪತ್ನಿಯನ್ನು ಕೊಲೆಮಾಡಿ ಪತಿ ಪರಾರಿ➤ ಅನಾಥವಾದ ಕಂದಮ್ಮಗಳು

(ನ್ಯೂಸ್ ಕಡಬ) newskadaba.com.ಬೆಂಗಳೂರು,ಆ.5: ತಡರಾತ್ರಿ ಪತ್ನಿಯನ್ನು ಕೊಂದು ಪತಿಯೊಬ್ಬ ಪರಾರಿಯಾಗಿದ್ದು. ಅವರ ಇಬ್ಬರು ಮಕ್ಕಳು ಅಮ್ಮನ ಶವದ ಜತೆಯೇ ರಾತ್ರಿಯಿಡೀ ಕಳೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಮಾರತಹಳ್ಳಿಯ ಮುನೇಕೊಳಲು ಸಮೀಪದ 26 ವರ್ಷದ ಸಂಧ್ಯಾ ಎನ್ನುವವರು ಕೊಲೆಯಾದವರು. ತಡರಾತ್ರಿ ಸಂಧ್ಯಾ ಅವರು ನಿದ್ದೆ ಮಾಡುತ್ತಿದ್ದ ಸಂದರ್ಭದಲ್ಲಿ ನಾಗೇಶ್‌ ಅವರನ್ನು ಕೊಲೆ ಮಾಡಿದ್ದ. ತಮ್ಮ ತಾಯಿ ಸತ್ತಿದ್ದಾಳೆ ಎಂಬ ಅರಿವೂ ಇಲ್ಲದ ಇಬ್ಬರು ಮಕ್ಕಳು ಅಲ್ಲಿಯೇ ರಾತ್ರಿಯಿಡೀ ಕಳೆದಿದ್ದಾರೆ. ಬೆಳಗ್ಗೆ ಮೂರು ವರ್ಷದ ಮಗು ಎದ್ದಾಗ ತಾಯಿ ರಕ್ತದ ಮಡುವಿನಲ್ಲಿ ಬಿದ್ದದ್ದು ನೋಡಿದೆ. ಕೂಡಲೇ ಅಮ್ಮನಿಗೆ ಏನೋ ಆಗಿದೆ ಎಂದು ಮಾವನಿಗೆ ಕರೆ ಮಾಡಿದೆ. ಮಾವ ಮನೆಗೆ ಬಂದಾಗಲೇ ವಿಷಯ ತಿಳಿದುಬಂದಿದೆ.

Also Read  ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ! ➤ ಕರ್ನಾಟಕದ ನಗರಗಳಲ್ಲೂ ಇಂದಿನಿಂದ 5G ಸೇವೆ ಲಭ್ಯ

ಐದು ವರ್ಷಗಳ ಹಿಂದೆ ನಾಗೇಶ್‌ ಮತ್ತು ಸಂಧ್ಯಾ ವಿವಾಹವಾಗಿತ್ತು. ನಾಗೇಶ್‌ ಕೋಲಾರ ಜಿಲ್ಲೆಯ ಮುಳಬಾಗಿಲಿನ ಮೂಲದವನು. ಈ ದಂಪತಿಗೆ ಮೂರು ಮತ್ತು ಒಂದೂವರೆ ವರ್ಷದ ಮಕ್ಕಳಿದ್ದಾರೆ. ದಂಪತಿ ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು.ದಂಪತಿ ನಡುವೆ ಉಂಟಾಗಿದ್ದ ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎನ್ನಲಾಗಿದೆ. ಮೊಬೈಲ್‌ ಕರೆಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .

error: Content is protected !!
Scroll to Top