ವರ್ಕ್ ಫ್ರಮ್ ಹೋಮ್ ಗೆ ಇಂಟರ್ ನೆಟ್ ಸಮಸ್ಯೆ ಹಿನ್ನೆಲೆ ➤ ಕ್ಯೂಬಿಕಲ್ ಸೆಂಟರ್ ಆರಂಭ

(ನ್ಯೂಸ್ ಕಡಬ) newskadaba.com ಪುತ್ತೂರು, ಆ.04:  ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ಪುತ್ತೂರಿನಲ್ಲಿ ಉದ್ಯೋಗಿಗಳಿಗೆ ಕ್ಯೂಬಿಕಲ್ ಸೆಂಟರ್ ಆರಂಭಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಪ್ರಯತ್ನ ಮಾಡುವ ಮೂಲಕ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕೊರೋನಾ ವಿರುದ್ಧದ ಹೋರಾಟವನ್ನು ಸಮರ್ಥವಾಗಿ ಎದುರಿಸಿ ಪುತ್ತೂರು ತಾಲೂಕನ್ನು ರಾಜ್ಯಕ್ಕೆ ಮಾದರಿಯಾಗಿ ರೂಪಿಸಿದ ಹೆಮ್ಮೆ ಇವರದ್ದು. ನಗರದಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸದ್ಯ ಮನೆಯಿಂದಲೇ ತಮ್ಮ ಕೆಲಸವನ್ನ ಮಾಡುವ ಒತ್ತಡವನ್ನ ಎದುರಿಸುತ್ತಿದ್ದಾರೆ.

 

ಕೊವಿಡ್ 19 ಹಿನ್ನಲೆಯಲ್ಲಿ ಮಹಾನಗರದಲ್ಲಿ ಕೆಲಸ ಮಾಡುತ ಒಂದಿಷ್ಟು ಉದ್ಯೋಗಸ್ತರು, ನಗರವನ್ನ ತೊರೆದು ಮನೆಯತ್ತ ಮುಖಮಾಡಿ ತಮ್ಮ ಉದ್ಯೋಗವನ್ನು ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಮಾಡುವ ಪರಿಸ್ಥಿಯು ಎದುರಾಗಿದೆ. ಆದರೆ ಗ್ರಾಮೀಣ ಭಾಗದಲ್ಲಿ ಸರಿಯಾದ ನೆಟ್‍ವರ್ಕ್ ಸಮಸ್ಯೆಯಿಂದ ” ವರ್ಕ್ ಫ್ರಮ್ ಹೋಮ್” ಗೆ ಹೆಚ್ಚಿನ ಸಮಸ್ಯೆ ಉಂಟಾಗಿದೆ. ಇದಕ್ಕಾಗಿ ಪುತ್ತೂರಿನಲ್ಲಿ ಮುಳಿಯ ಕ್ಯೂಬಿಕ್ ಸ್ಪೇಸ್ ನಲ್ಲಿ ಒಂದು ತಿಂಗಳ ಕಾಲ ಉಚಿತವಾಗಿ ಅವಕಾಶ ಕೊಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದ್ದಾರೆ. ಎಲೆಕ್ಟ್ರೋನಿಕ್ ಯುಗದಲ್ಲಿ ಮಹಾನಗರದಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗ ಮಾಡುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ನೆಟ್ ವರ್ಕ್ ಸಮಸ್ಯೆಯಿಂದಾಗಿ ಆನೇಕರು ಗುಡ್ಡ ಹತ್ತುವುದು, ಪೇಟೆ ಗೆ ಬರುವುದು, ಸಂಬಂಧಿಕರ ಮನೆಗೆ ಹೋಗುವುದು ಕಂಡು ಬಂದಿದೆ. ಅಂತವರಿಗೆ ಉಚಿತವಾಗಿ ವೈಫೈ ಮೂಲಕ ಇಂಟರ್ ನೆಟ್ ಸೌಲಭ್ಯ ಒದಗಿಸಲು ಕುರಿತು ಚಿಂತಿಸಿ ಪುತ್ತೂರಿನಲ್ಲಿ ಮುಳಿಯ ಜ್ಯುವೆಲ್ಲರ್ಸ್ ನ ಆಡಳಿತ ನಿರ್ದೇಶಕ ಸಹೋದರರಾದ ಮುಳಿಯ ಕೇಶವಪ್ರಸಾದ್ ಮತ್ತು ಮುಳಿಯ ಕೃಷ್ಣನಾರಾಯಣ ಅವರು ಪೂರ್ಣ ರೀತಿಯಲ್ಲಿ ಸಹಕಾರ ನೀಡಲಿದ್ದಾರೆ ಎಂದು ಹೇಳಿದ್ದಾರೆ. ಎಂದು ಶಾಸಕ ಸಂಜೀವ ಮಠಂದೂರು ರವರು ತಿಳಿಸಿದ್ದಾರೆ.

 

error: Content is protected !!

Join WhatsApp Group

WhatsApp Share