(ನ್ಯೂಸ್ ಕಡಬ) newskadaba. ಕುಕ್ಕೆ ಸುಬ್ರಹ್ಮಣ್ಯ, ಆ.02: ಕುಕ್ಕೆ ಸುಬ್ರಹ್ಮಣ್ಯದ ಯುವ ಬ್ರಿಗೇಡ್ ಸಂಘಟನೆಯ ಮೊದಲ ವರ್ಷದ ದಿನಾಚರಣೆಯನ್ನು ಸುಬ್ರಹ್ಮಣ್ಯ ಗ್ರಾಮದ ಮುಕ್ತಿಧಾಮದಲ್ಲಿ ರುದ್ರಾಕ್ಷಿ ಗಿಡ ನೆಡುವ ಮೂಲಕ ಇಂದು ಆಚರಿಸಲಾಯಿತು.
ಕುಕ್ಕೆ ಸುಬ್ರಹ್ಮಣ್ಯದ ಯುವ ಬ್ರಿಗೇಡ್ ಸಂಘಟನೆಯ ಮೊದಲ ವರ್ಷದ ದಿನಾಚರಣೆಯನ್ನ ಆಚರಿಸಿದ್ದಾರೆ. ಉದ್ಯಮಿ ಯಜ್ಞೇಶ್ ಆಚಾರ್ ಈ ಕಾರ್ಯಕ್ರಮವನ್ನ ರುದ್ರಾಕ್ಷಿ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಸುಬ್ರಹ್ಮಣ್ಯ ಗ್ರಾಮದಲ್ಲಿ ಯುವ ಬ್ರಿಗೇಡ್ ಕಳೆದ ಒಂದು ವರ್ಷದಿಂದ ಪ್ರತಿ ಭಾನುವಾರ ಗ್ರಾಮ, ನದಿ ಸ್ವಚ್ಛತೆ, ಪರಿಸರ ಸಂರಕ್ಷಣೆ, ಗಿಡ ನೆಡುವುದು, ಹೀಗೆ ಒಂದಲ್ಲಾ ಒಂದು ರೀತಿಯ ಮುಂತಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕಳೆದೊಂದು ವರ್ಷದಲ್ಲಿ ಕುಮಾರಧಾರ, ದರ್ಪಣ ತೀರ್ಥ, ದೇವಾಸ್ಥಾನದ ತೀರ್ಥದ ಕೆರೆ, ಗಡಿ ಚಾಮುಂಡಿ ಕ್ಷೇತ್ರ ಕುಲ್ಕುಂದ ಬಸವೇಶ್ವರ ಕ್ಷೇತ್ರಗಳ ಸ್ಪಚ್ಚತೆ ಕಾರ್ಯ ಮಾಡಿದ್ದಾರೆ. ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ ಈ ತಂಡ ತಮ್ಮ ಕಾರ್ಯ ಚಟುವಟಿಯನ್ನ ಮಾಡುತ್ತಾ ಬಂದಿದ್ದಾರೆ. ಇಂದು ಯುವ ಬ್ರಿಗೇಡ್ ತಂಡದ ನಾಯಕ ಸೂರ್ಯನಾರಾಯಣ ಭಟ್, ಗ್ರಾ. ಪಂ , ಅಭಿವೈದ್ದಿ ಅಧಿಕಾರಿ ಮುತ್ತಪ್ಪ ದವಳಗಿ, .ಗ್ರಾ. ಪಂ ಮಾಜಿ ಸದಸ್ಯ ಪ್ರಶಾಂತ್ ಭಟ್ ಮಾಣೀಲ, ಉದ್ಯಮಿ ರವಿಕಕ್ಕೆ ಪದವು, ಸುಬ್ರಹ್ಮಣ್ಯ ಐನೆಕಿದು ಮಹೇಶ್ ಕೂರ್ಗ್, ಸೇರಿದಂತೆ ಯುವಬ್ರಿಗೇಡ್ ಕಾರ್ಯಕರ್ತರು ಉಪಸ್ಥಿತರಿದ್ದರು.