(ನ್ಯೂಸ್ ಕಡಬ) newskadaba.com ಮಂಗಳೂರು, ಜು.31: ಮುಸ್ಲಿಮ್ ಸಮುದಾಯದ ಪ್ರಮುಖ ಹಬ್ಬವಾದ ಬಕ್ರೀದ್‌ನ್ನು ಕರಾವಳಿಯಲ್ಲಿ ಆಚರಿಸಲಾಯಿತು. ಈ ವರ್ಷ ಕೊರೊನಾ ಕಾರಣದಿಂದ ಸರಳವಾಗಿ ಆಚರಿಸಲಾಗುತ್ತಿದೆ. ಐವರ್ನಾಡಿನ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಅತಿಕರಮಜಲು ಜಮ್ಮಾ ಮಸೀದಿಯಲ್ಲು ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಬಕ್ರೀದ್ ಆಚರಣೆಯನ್ನ ಮಾಡಲಾಯಿತು.
ಬಕ್ರೀದ್ ಹಬ್ಬವನ್ನು ಪ್ರವಾದಿ ಇಬ್ರಾಹಿಂ (ಅ) ಮತ್ತು ಅವರ ಪುತ್ರ ಇಸ್ಮಾಯಿಲ್ (ಅ) ಅವರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೊರೊನಾ ಕಾರಣದಿಂದಾಗಿ ಈದ್ಗಾ ಮಸೀದಿ, ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬದ ಸಾಮೂಹಿಕ ಪ್ರಾರ್ಥನೆ ಆಚರಣೆ ಇಲ್ಲ ಎಂದು ಮಸೀದಿಯ ಅಧ್ಯಕ್ಷರಾದ ಹಾಜೀ ವೈ ಅಬ್ದುಲ್ಲ ಕುಂಞಿ ಈಗಾಗಲೇ ತಿಳಿಸಿದ್ದಾರೆ. ಸರ್ಕಾರವು ಕೊರೊನಾ ಕಾರಣದಿಂದ ಸರಳವಾಗಿ ಹಬ್ಬವನ್ನು ಆಚರಿಸುವಂತೆ ಮಾರ್ಗಸೂಚಿ ಹೊರಡಿಸಿದ್ದು ಈದ್ ಖುತ್ಬಾಕ್ಕೂ ನಿರ್ಬಂಧ ವಿಧಿಸಲಾಗಿದೆ. ಬಕ್ರೀದ್ ಹಬ್ಬದ ಈ ದಿನದಂದು ಕುದ್ರೋಳೀಯ ನಡುಪಲ್ಲಿ ಮಸೀದಿಗೆ ಬಂದು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ದು ಈ ವೇಳೆ ಎಲ್ಲರೂ ಮಾಸ್ಕ್ ಧರಿಸಿರುವುದು ಕಂಡು ಬಂದಿದೆ. ಹಾಗೆಯೇ ಸರ್ಕಾರದ ಸೂಚನೆಯಂತೆ ಸಾಮಾಜಿಕ ದೂರವನ್ನು ಕಾಯ್ದುಕೊಳ್ಳಲಾಗಿದೆ. ಉಡುಪಿಯಲ್ಲೂ ಪವಿತ್ರ ಭಕ್ರೀದ್ ಆಚರಿಸಲಾಗಿದ್ದು ಸಾಮಾಜಿಕ ದೂರವನ್ನು ಕಾಪಾಡಿ ಸ್ಯಾನಿಟೈಝರ್‌ಗಳನ್ನು ಬಳಸುವ ಮೂಲಕ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.ಕಡಬ, ಮರ್ಧಾಳ, ಸೇರಿದಂತೆ ಹಲವೆಡ ಇಂದು ಸರಳವಾಗಿ ಹಬ್ಬವನ್ನ ಆಚರಿಸಲಾಗಿದೆ. ಇನ್ನು ಕರಾವಳಿ ಹೊರತುಪಡಿಸಿ ಉಳಿಡೆದೆ ನಾಳೆ ಆಗಸ್ಟ್ 1ರಂದು ಬಕ್ರೀದ್ ಆಚರಿಸಲಾಗುತ್ತದೆ.