(ನ್ಯೂಸ್ ಕಡಬ) newskadaba.com ದಾವಣಗೆರೆ,ಸೆ.13, ಅವ್ಯವಸ್ಥೆಗಳ ಆಗರವಾದ ಕಾರ್ಮಿಕರ ವಿಮಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೂಕ್ತ ಸೌಕರ್ಯಗಳು ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರ ಸಂಜೆಯಿಂದ ಇಎಸ್‍ಐ ಅಸ್ಪತ್ರೆಯಲ್ಲಿ ಕರೆಂಟ್ ಇಲ್ಲದೆ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿತ್ತು. ವೈದ್ಯರು ಹಾಗೂ ಅಸ್ಪತ್ರೆ ಸಿಬ್ಬಂದಿಗಳು ಮೊಬೈಲ್ ಲೈಟ್ ಹಾಗೂ ಟಾರ್ಚ್ ಹಿಡಿದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಕಂಡುಬಂತು. ಅದರಲ್ಲೂ ಹೆರಿಗೆ ಮಾಡಿಸಲು ದಾಖಲಾಗಿದ್ದ ಗರ್ಭಿಣಿಯರು ನಾವು ಆಸ್ಪತ್ರೆಯಲ್ಲಿದ್ದೇವೋ ಇಲ್ಲ ನರಕದಲ್ಲಿ ಇದ್ದೇವೋ ಎನ್ನುವಂತಾಗಿದೆ. ಇದರಿಂದ ಬೇಸತ್ತ ಕೆಲವು ಗರ್ಭಿಣಿಯರು ಬೇರೆ ಆಸ್ಪತ್ರೆಗೆ ಹೋದ್ರೆ, ಇನ್ನುಳಿದ ಕೆಲವು ಬಡ ಮಹಿಳೆಯರು ಕತ್ತಲಿನಲ್ಲೇ ಕೂರುವಂತಾಗಿದೆ.
ಅಸ್ಪತ್ರೆಯ ಪಕ್ಕದಲ್ಲಿರುವ ಕ್ವಾಟ್ರಸ್‍ನಲ್ಲಿ ದಿನದ 24 ಗಂಟೆ ಕರೆಂಟ್ ಇರುತ್ತದೆ ಆದ್ರೆ ಪಕ್ಕದಲ್ಲೆ ಇರುವ ಈ ಅಸ್ಪತ್ರೆಯಲ್ಲಿ ಮಾತ್ರ ಕರೆಂಟ್ ಇರೋದಿಲ್ಲ. ಇದರ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಪ್ರತಿಕ್ರೀಯೆ ನೀಡುತ್ತಿಲ್ಲ ಎನ್ನುವುದು ರೋಗಿಗಳ ಆರೋಪ.