ಮಂಗಳೂರು: ಆಟೋ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ… !!!

(ನ್ಯೂಸ್ ಕಡಬ) newskadaba.com ಮಂಗಳೂರು: ಜು.27.,
ನಗರದ ವೆನ್ಲಾಕ್‌ ಆಸ್ಪತ್ರೆಯ ಸಮೀಪದ ಶ್ರೀ ರಾಮ ಭವನ ಆಟೋ ನಿಲ್ದಾಣದಲ್ಲಿ ವ್ಯಕ್ತಿಯ ಮೃತ ದೇಹವೊಂದು ಪತ್ತೆಯಾಗಿದೆ.


ಕೊರೊನಾ ಹಿನ್ನಲೆ ಹೇರಲಾದ ಲಾಕ್ ಡೌನ್ ಸಂದರ್ಭದಲ್ಲಿ ನಗರದಲ್ಲಿ ಹಲವರು ನಿರ್ಗತಿಕರು ಈ ಹಸಿವಿನಿಂದ ಬಳಲುತ್ತಿದ್ದು ಈ ವ್ಯಕ್ತಿಯು ಹಸಿವಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಈ ಬಗ್ಗೆ ಮಾಹಿತಿ ನೀಡಿರುವ ಆಟೋ ಚಾಲಕರೋರ್ವರು, ನಾವು ಆ ವ್ಯಕ್ತಿಯನ್ನು ನೋಡಿದಾಗ ಆಹಾರ ನೀಡುತ್ತಿದ್ದೆವು. ಆದರೆ ಈ ಲಾಕ್‌ಡೌನ್‌ ಸಂದರ್ಭದಲ್ಲಿ ಈ ವ್ಯಕ್ತಿಗೆ ಆಹಾರವಿಲ್ಲದೆ ಹಸಿವಿನಿಂದಾಗಿ ಶಕ್ತಿ ಕಳೆದುಕೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

error: Content is protected !!
Scroll to Top