ನೂಜಿಬಾಳ್ತಿಲ: ರೆಂಜಿಲಾಡಿ ಗ್ರಾಮ ಬಿಜೆಪಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಹಳೆನೂಜಿ► ಗ್ರಾ.ಪಂ. ಸದಸ್ಯ ಹರೀಶ್ ನಡುವಳಿಕೆ ಪಕ್ಷದ ಹುದ್ದೆಗೆ ರಾಜೀನಾಮೆ

(ನ್ಯೂಸ್ ಕಡಬ) newskadaba.com ಕಡಬ,ಸೆ.13, ನೂಜಿಬಾಳ್ತಿಲ ರೆಂಜಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಸಮಿತಿ ಅಧ್ಯಕ್ಷ ಮಾಜಿ ಸಿ.ಎ. ಬ್ಯಾಂಕ್ ನಿರ್ದೇಶಕ ಕೊಣಾಜೆ ಗ್ರಾಮದ ಬಿಜೆಪಿ ವಿಸ್ತಾರಕ ಚಂದ್ರಶೇಖರ ಹಳೆನೂಜಿ ಹಾಗೂ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ಸದಸ್ಯ ಹಾಗೂ ನೂಜಿಬಾಳ್ತಿಲ ಗ್ರಾಮದ ಬೂತ್ ಸಂಖ್ಯೆ 30ರ ಬಿಜೆಪಿ ಪಕ್ಷದ ಗ್ರಾಮ ಸಮಿತಿ ಅಧ್ಯಕ್ಷನಾಗಿರುವ ಹರೀಶ್ ನಡುವಳಿಕೆ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಅವರು ಕಡಬ ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ಸೆ.12ರಂದು ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ ತನ್ನ ವೈಯಕ್ತಿಕ ಕಾರಣಗಳಿಂದ ಪಕ್ಷದ ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ತಾನೊಬ್ಬ ಭಾರತೀಯ ಜನತಾ ಪಕ್ಷದ ಸಾಮಾನ್ಯ ಮತದಾರನಾಗಿರುತ್ತೇನೆ ಎಂದು ತಿಳಿಸಿದ್ದಾರೆ.

Also Read  ಕರಾವಳಿಯಲ್ಲಿ ಮುಂದುವರಿದ ನೈತಿಕ ಪೊಲೀಸ್ ಗಿರಿ - ವಿದ್ಯಾರ್ಥಿಗೆ ಹಲ್ಲೆ

ಬಳಿಕ ಪತ್ರಿಕಾ ಹೇಳಿಕೆ ನೀಡಿದ ಚಂದ್ರಶೇಖರ ಗೌಡ ಹಾಗೂ ಹರೀಶ್ ನಡುವಳಿಕೆ ಅವರು ನೂಜಿಬಾಳ್ತಿಲದಲ್ಲಿ ಅನಧೀಕೃತವಾಗಿ ತೆರೆದಿರುವ ಮದ್ಯದಂಗಡಿ ಬಂದ್ ಆಗಿ ಗ್ರಾಮಸ್ಥರಾದ ನಾವು ನೆಮ್ಮದಿಯ ಜೀವನ ನಡೆಸಲು ನಮಗೆ ನ್ಯಾಯ ಸಿಗುವವರೆಗೆ ರಾಜಕೀಯ ರಹಿತವಾಗಿ ಜಾತಿ ಧರ್ಮ ಪಕ್ಷ ಬೇಧ ಮರೆತು ಒಗ್ಗಟಿನಿಂದ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

error: Content is protected !!
Scroll to Top