ಕ್ಯಾನ್ಸರ್‌ ಬಾಧಿತ ಮಹಿಳೆಗೆ ಉಚಿತ ಆಯಂಬುಲೆನ್ಸ್‌ ಸೇವೆ ➤ ಅಭಿಲಾಷ್‌ ಅವರು ಮಾನವೀಯ ನಡೆಗೆ ಶ್ಲಾಘನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.26:   ಕ್ಯಾನ್ಸರ್‌ ಬಾಧಿತ ಕಟೀಲಿನ ಕೊಂಡೇಲದ ಬಡ ಮಹಿಳೆಯೊಬ್ಬರ ನೆರವಿಗೆ ಬೆಳ್ತಂಗಡಿ ತಾಲೂಕಿನ ಆಯಂಬುಲೆನ್ಸ್‌ ಚಾಲಕರೊಬ್ಬರು ನೆರವಾಗಿದ್ದಾರೆ.

 

 

 

ಇತ್ತೀಚೆಗೆ ಕಟೀಲಿನ ರಾಮ್‌ ಸೇನಾ ಕೇಸರಿ ಘಟಕದ ಕಾರ್ಯಕರ್ತರೊಬ್ಬರು ಕೊಂಡೇಲದ ಬಡ ಮಹಿಳೆಯೊಬ್ಬರ ಕರುಣಾಜನಕ ಪರಿಸ್ಥಿತಿಯ ಕುರಿತು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಅದನ್ನು ಗಮನಿಸಿದ ಬೆಳ್ತ‌ಂಗಡಿಯ ಖುಷಿ ಆಯಂಬುಲೆನ್ಸ್‌ ಮಾಲಕ,ಚಾಲಕರಾಗಿರುವ ಅಭಿಲಾಷ್‌ ಎಂ. ಅವರು ಸಂತ್ರಸ್ತೆಗೆ ಜೀವನ ಪರ್ಯಂತ ಆಯಂಬುಲೆನ್ಸ್‌ ಸೇವೆಯನ್ನು ಉಚಿತವಾಗಿ ಒದಗಿಸುವುದಾಗಿ ಘೋಷಿಸಿದ್ದಾರೆ.ಮೂಡುಬಿದಿರೆಯಿಂದ ಮಂಗಳೂರಿಗೆ ವಾರಕ್ಕೊಂದು ಬಾರಿ ರೋಗಿಯು ಹೋಗಿ ಬರಬೇಕಾಗಿತ್ತು. ಕೋವಿಡ್ ಸಂದರ್ಭ ಪ್ರತಿ ವಾರ ವೈದ್ಯರ ಭೇಟಿ ಸಾಧ್ಯವಾಗದೆ ಮಹಿಳೆ ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ಈ ಸಂದರ್ಭ ಅಭಿಲಾಷ್‌ ಅವರು ಮಾನವೀಯ ನಡೆಯ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

Also Read  ಕರಾವಳಿಯಲ್ಲಿ 'ಆರೆಂಜ್ ಅಲರ್ಟ್' ಘೋಷಣೆ

 

 

error: Content is protected !!
Scroll to Top