(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು.24: ಬಳ್ಳಿಯ ರೂಪದಲ್ಲಿ ಎಡೆ ಎತ್ತಿದ ನಾಗನ ರೂಪದಲ್ಲಿ ಬೆಳೆದಿರುವ ಬಳ್ಳಿ ಬೆಳ್ತಂಗಡಿಯಲ್ಲಿ ಪತ್ತೆಯಾಗಿರುವುದು ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದನ್ನ ಪ್ರಕೃತಿ ವಿಸ್ಮಯವೆಂದರೂ ತಪ್ಪಾಗಲ್ಲ. ಅಂತಹ ಘಟನೆಗೆ ಇಂದು ಬೆಳ್ತಂಗಡಿಯಲ್ಲಿ ಒಂದು ಘಟನೆ ಸಾಕ್ಷಿಯಾಗಿದೆ . ಹೌದು, ನಾಗರಪಂಚಮಿ ಹಬ್ಬ ಸಮೀಪಿಸುತ್ತಿದ್ದು ಈ ನಡುವೆ ದಕ್ಷಿಣಕನ್ನಡ ಜಿಲ್ಲೆಯಲ್ಲೊಂದು ಬಳ್ಳಿಯೊಂದು ನಾಗನ ರೂಪದಲ್ಲಿ ಹಡೆ ಎತ್ತಿ ನಿಂತಿರುವಂತೆ ಕಂಡುಬಂದಿದೆ. ಬೆಳ್ತಂಗಡಿ ತಾಲೂಕಿನ ಬಳಂಜದ ಶಾಸ್ತಾರ ಬ್ರಹ್ಮಲಿಂಗೇಶದವರ ದೇವಸ್ಥಾನದಲ್ಲಿ ಆರಾಧಿಸಿಕೊಂಡು ಬರುತ್ತಿರುವ ನಾಗನ ಕಲ್ಲಿಗೆ ಈ ಬಳ್ಳಿ ಸುತ್ತುಹಾಕಿಕೊಂಡು ಬೆಳೆದಿದೆ. ನೋಡಲು ಸರ್ಪವೊಂದು ಹೆಡೆ ಎತ್ತಿ ನಿಂತಿರುವ ರೀತಿಯಲ್ಲಿ ಇಂದು ಕಂಡುಬರುತ್ತಿದ್ದು,ಬಳ್ಳಿಯ ಈ ವಿಶೇಷತೆಯನ್ನು ನೋಡಲು ಜನ ಇದೀಗ ಈ ನಾಗನ ಕಟ್ಟೆಗೆ ಬರಲಾರಂಭಿಸಿದ್ದಾರೆ.
ಬುಡದಿಂದ ತೆಳ್ಳಗಿದ್ದು, ಮೇಲ್ಭಾಗಕ್ಕೆ ಬಂದಂತೆ ಇದು ನಾಗನ ಹೆಡೆಯ ರೂಪವನ್ನು ಹೊಂದಿದೆ. ಕರಾವಳಿಯಲ್ಲಿ ನಾಗರ ಪಂಚಮಿ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ಇಲ್ಲಿನ ಪ್ರತಿಯೊಂದು ಕುಟುಂಬವೂ ನಾಗರಪಂಚಮಿ ದಿನದಂದು ತಮಗೆ ಸಂಬಂಧಪಟ್ಟ ನಾಗನ ಕಟ್ಟೆಗಳಲ್ಲಿ ನಾಗನಿಗೆ ಎಳನೀರು, ಹಾಲಿನ ಅಭಿಷೇಕ ಮಾಡುವುದು ಸಾಮಾನ್ಯವಾಗಿದೆ. ಇದೇ ರೀತಿ ಇಂಥ ಹಬ್ಬ ಹರಿದಿನಗಳು ಸಮೀಪಿಸುತ್ತಿದ್ದಂತೆ ಪ್ರಕೃತಿಯೂ ಹಬ್ಬಗಳಿಗೆ ಸಂಬಂಧ ಕಲ್ಪಿಸುವ ರೀತಿಯಲ್ಲಿ ಇಂಥಹ ಕೆಲವು ವಿಶೇಷತೆಗಳ ಮೂಲಕ ಜನರನ್ನು ಸೆಳೆಯುತ್ತದೆ.