ಮಂಗಳೂರು : ಆತಂಕ ಸೃಷ್ಟಿಸಿದ ತುರಾಯಾ ಸ್ಯಾಟಲೈಟ್ ಫೋನ್​ಗಳ ಸಂಭಾಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.24:  ದಕ್ಷಿಣ ಕರ್ನಾಟಕದ ಆಯ್ದ ಸ್ಥಳಗಳಲ್ಲಿ ತುರಾಯಾ ಸ್ಯಾಟಲೈಟ್ ಫೋನ್​ಗಳ ಸಂಭಾಷಣೆ ದಿನೇದಿನೆ ಹೆಚ್ಚಾಗುತ್ತಿದ್ದು, ಉಗ್ರರು ಮತ್ತು ನಕ್ಸಲ್ ಚಟುವಟಿಕೆ ಬಲಗೊಳ್ಳುತ್ತಿದ್ದಿಯೇ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಬೆಳ್ತಂಗಡಿಯ ಕೊಲ್ಲಿ ಕಾಡುಮನೆ ಗೆಸ್ಟ್ ಹೌಸ್ ಪರಿಸರ ಕಾಡು ಪ್ರದೇಶದಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಅನ್ನು ಕಳೆದ 1 ತಿಂಗಳ ಹಿಂದೆ ಬಳಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

 

 

ಈ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಒಂದೆಡೆ ಈ ಪ್ರದೇಶವು ನಕ್ಸಲ್​ಪೀಡಿತವಾಗಿದ್ದು ಮತ್ತೆ ನಕ್ಸಲ್ ಚಟುವಟಿಕೆ ಸಕ್ರಿಯ ಗೊಂಡಿರ ಬಹುದೆಂದು ಎಂಬ ಅನುಮಾನದ ನಡುವೆ ಕಾರ್ಕಳದ ಮಾಳ ಪರಿಸರದಲ್ಲೂ ಅದೇ ಸ್ಯಾಟಲೈಟ್ ಬಳಕೆಯಾಗಿರುವ ಮಾಹಿತಿ ಹೊರಬಿದ್ದಿದೆ. ಈ ಬೆಳವಣಿಗೆಯ ನಡುವೆ ಶಿರಸಿ, ದಾವಣಗೆರೆ, ಶಿವಮೊಗ್ಗ, ಚಾಮರಾಜನಗರ ಸೇರಿ ದಕ್ಷಿಣ ಕರ್ನಾಟಕದ ಕೆಲವೆಡೆಗಳಲ್ಲಿ ತುರಾಯಾ ಸ್ಯಾಟಲೈಟ್ ಫೋನ್ ಬಳಕೆ ಮಾಡಲಾಗಿದೆ. ಅದರಲ್ಲೂ ಕಾಡುಪ್ರದೇಶ ಹಾಗೂ ನಿರ್ಜನ ಪ್ರದೇಶಗಳಲ್ಲಿ ಬಳಸಿರುವುದು ಕಂಡುಬಂದಿದೆ. ಬೇರೆ ಬೇರೆ ಸ್ಥಳಗಳಲ್ಲಿ ಹಲವು ದಿನಗಳ ಅಂತರದಲ್ಲಿ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವ ಪ್ರಕರಣದ ಹಿಂದೆ ತಂಡ ಸಕ್ರಿಯೆಗೊಂಡಿದೆ ಎಂಬ ಮಾಹಿತಿ ಬೆಳಕಿಗೆ ಬರುತ್ತಿದೆ. ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವುದು ಕೆಲ ದಿನಗಳ ಹಿಂದೆಯೇ ಮಾಹಿತಿ ಲಭ್ಯವಾಗಿದೆ. ಉಗ್ರರೇ ಬಳಕೆ ಮಾಡಿದ್ದಾರೆ ಎಂಬುದು ಖಚಿತವಿಲ್ಲ , ಈ ಪ್ರಕರಣವನ್ನು ನಿರ್ಲಕ್ಷ್ಯ ಮಾಡದೆ ಫೋನ್ ಬಳಕೆದಾರರನ್ನು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

 

error: Content is protected !!

Join the Group

Join WhatsApp Group