ತೊಕ್ಕೊಟ್ಟು ಬಳಿ ಕಾರು, ಬೈಕ್ ಅಪಘಾತ : ಬೈಕ್ ಸವಾರರು ಗಂಭೀರ

(ನ್ಯೂಸ್ ಕಡಬ) newskadaba  ತೊಕ್ಕೊಟ್ಟು, ಜು.20 :  ಬೈಕ್ ಕಾರು ನಡುವೆ ಸಂಭವಿಸಿದ ಅಪಘಾತ ದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಕಾಪಿಕಾಡು ಬಳಿ ಭಾನುವಾರ ಸಂಭವಿಸಿದೆ.ಚೆಂಬುಗುಡ್ಡೆ ನಿವಾಸಿಗಳಾದ ಚರಣ್,  ಮತ್ತು ಮಂಜುನಾಥ್ ಗಂಭೀರವಾಗಿ ಗಾಯಗೊಂಡವರು.

 

ಕೂಲಿ ಕಾರ್ಮಿಕರಾಗಿದ್ದ ಇಬ್ಬರು ಬೈಕಿನಲ್ಲಿ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ ತೆರಳುತ್ತಿದ್ದ ಸಂದರ್ಭ ಮುಂದಿನಿಂದ ಇದ್ದ ಕಾರು ಅವೈಜ್ಞಾನಿಕ ತಿರುವಿನಲ್ಲಿ ಬಲಭಾಗಕ್ಕೆ ತಿರುಗಲು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಬೈಕ್ ಢಿಕ್ಕಿ ಹೊಡೆದಿದೆ.ಕಾರು ಚಾಲಕ ಮಹಮ್ಮದ್ ಅಜ್ಮಲ್ ಎಂಬವರ ವಿರುದ್ಧ ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಅ. 14ರಿಂದ ಅ.18ರ ಮಧ್ಯರಾತ್ರಿಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿಷೇಧ

 

error: Content is protected !!
Scroll to Top