ಪುತ್ತೂರಿಗಿಂದು ಕೊರೋನಾಘಾತ ➤ ಮಾಡ್ನೂರು ಗ್ರಾಮದ ವ್ಯಕ್ತಿ ಕೋವಿಡ್ ಗೆ ಬಲಿ



(ನ್ಯೂಸ್ ಕಡಬ) newskadaba.com ಪುತ್ತೂರು ,ಜು.12: ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಕೋವಿಡ್ ಪಾಸಿಟಿವ್ ಆಗದ್ದ ಮಾಡ್ನೂರು ಗ್ರಾಮದ ವ್ಯಕ್ತಿ ಇಂದು ಸಾವನ್ನಪ್ಪಿದ್ದಾರೆ. ಮಾಡ್ನೂರು ಗ್ರಾಮದ ಮೂಲಡ್ಕದ 50 ವರ್ಷ ಪ್ರಾಯದ ನಿವಾಸಿಯೊಬ್ಬರಿಗೆ ಜು.10ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. ಆದರೆ ಇಂದು ತೀರಾ ಅನಾರೋಗ್ಯದಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿದ್ದಾರೆ.





ನ್ಯೂಮುನಿಯಾ ಹಿನ್ನೆಲೆಯಲ್ಲಿ ಮೊದಲು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರನ್ನು ತೀರಾ ಗಂಭೀರ ಸ್ಥಿತಿಗೆ ಒಳಗಾದ ಕಾರಣ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಗಂಟಲು ದ್ರವ ಪರೀಕ್ಷೆಯಲ್ಲಿ ವ್ಯಕ್ತಿಗೆ ಕೋವಿಡ್-19 ದೃಢಪಟ್ಟಿದ್ದು, ಇಂದು ಅವರು ಮೃತಪಟ್ಟಿದ್ದಾರೆ. ಮೃತ ದೇಹವನ್ನು ಪುತ್ತೂರು ಮಾಡ್ನೂರು ಗೆ ತಂದು ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ ಅಶೋಕ್ ರೈ ತಿಳಿಸಿದ್ದಾರೆ.






 

error: Content is protected !!
Scroll to Top