ರಸ್ತೆಬಿಟ್ಟ ಚರಂಡಿಗೆ ಇಳಿದ ಲಾರಿ ➤ ಪ್ರಾಣಾಪಾಯದಿಂದ ಚಾಲಕ, ನಿರ್ವಾಹಕ ಪಾರು

(ನ್ಯೂಸ್ ಕಡಬ) newskadaba.com ಪೆರ್ನೆ,ಜು.07:  ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಸಮೀಪದ ಕಡಂಬು ಎಂಬಲ್ಲಿ ಟ್ಯಾಂಕರ್ ಲಾರಿ ರಸ್ತೆಯ ಪಕ್ಕದಲ್ಲಿರುವ ಚರಂಡಿಗೆ ಬಿದ್ದು ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಕಳೆದ ವಾರ ಇದೆ ಚರಂಡಿಗೆ ಬೃಹತ್ ಲಾರಿಯೊಂದು ಬಿದ್ದು ಜಖಂ ಗೊಂಡಿದ್ದು.

ಈ ಚರಂಡಿಯು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡಿದ್ದು ಎದುರಿನಿಂದ ಬರುವ ವಾಹನಕ್ಕೆ ಸೈಡ್ ಕೊಡಲು ಚಾಲಕರು ತಬ್ಬಿಬ್ಬಾಗಿ ಈ ಚರಂಡಿಗೆ ಬೀಳುವ ಪರಿಸ್ಥಿತಿ ಎದುರಾಗಿದ್ದು ಇನ್ನೂ ಹೆಚ್ಚಿನ ಅಪಾಯ ಸಂಭವಿಸುವ ಮುಂಚೆ ಹೆದ್ದಾರಿ ಇಲಾಖೆ ಈ ಕಡೆ ಗಮನಹರಿಸಬೇಕಾಗಿ ಸಾರ್ವಜನಿಕರ ವಿನಂತಿಸಿದ್ದಾರೆ.

Also Read  ಮಹಿಳಾ ಪರ ಯೋಜನೆಗಳನ್ನು ಸಾಮಾನ್ಯರಿಗೂ ತಲುಪಿಸಲು ಡಿಸಿ ಸೂಚನೆ

error: Content is protected !!
Scroll to Top