ದಿಡುಪೆ ಕಡಮಗುಂಡಿಯಲ್ಲಿ ಪ್ರವಾಸಿಗರ ದಂಡು ➤ ಕಲುಷಿತಗೊಳ್ಳುತ್ತಿದೆ ಜಲಪಾತದ ನೀರು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ,ಜು.03: ಕರಾವಳಿಯನ್ನ ತಬ್ಬಿಕೊಂಡಿರುವ ಕೊರೋನಾ ಎಗ್ಗಿಲ್ಲದೆ ದಿನೆ ದಿನೇ ಸದ್ದು ಮಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಪ್ರವಾಸಿತಾಣಗಳನ್ನ ಬಂದ್ ಕೂಡ ಮಾಡಿದ್ದಾರೆ. ಇದರ ನಡುವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ದಂಚಿನಲ್ಲಿರುವ ದಿಡುಪೆ ಕಡಮಗುಂಡಿ ಪ್ರದೇಶದಲ್ಲಿ ಪ್ರವಾಸಿಗರ ಕಿರಿ ಕಿರಿ ಅತಿಯಾಗಿದ್ದು, ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.


ಸರಕಾರ ಲಾಕ್‌ಡೌನ್‌ ಸಡಿಲಿಸಿದ ಬಳಿಕ ಬೆಂಗಳೂರು, ಮೈಸೂರು, ರಾಮನಗರ ಸಹಿತ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಿದ್ದು, ಕೆಲವರು ಜಲಪಾತಕ್ಕೆ ತೆರಳದೆ ಪರಿಸರದ ಗದ್ದೆ ತೋಟಗಳಲ್ಲೇ ಮಜಾ ಮಾಡುತ್ತಿರುತ್ತಾರೆ. ಮತ್ತೆ ಕೆಲವರು ಅಧಿಕೃತ ದಾರಿಯಲ್ಲಿ ತೆರಳದೆ ಸಿಕ್ಕಸಿಕ್ಕಲ್ಲಿ ಖಾಸಗಿ ಜಾಗದ ಮೂಲಕ ತೆರಳುತ್ತಿದ್ದಾರೆ. ಅಧಿಕೃತ ದಾರಿ ಮೂಲಕ ತೆರಳುವಾಗ ಪ್ಲಾಸ್ಟಿಕ್‌, ಮದ್ಯ ಮುಂತಾದವುಗಳನ್ನು ಕೊಂಡೊಯ್ಯಲು ಅಸಾಧ್ಯವಾದ ಕಾರಣ ಕಳ್ಳದಾರಿಯನ್ನು ಬಳಸುತ್ತಿದ್ದಾರೆ. ಜಲಪಾತ ಪ್ರದೇಶದಲ್ಲಿ 15, 20 ಮನೆಗಳಿವೆ.ಇವರು ಈ ಜಲಪಾತದ ನೀರನ್ನೇ ಅವಲಂಬಿತರಾಗಿದ್ದು, ಅದನ್ನು ಪ್ರವಾಸಿಗರು ಕಲುಷಿತ ಗೊಳಿಸುತ್ತಿದ್ದಾರೆ.  ಇವುಗಳ ಹೊರತಾಗಿಯೂ ಕೆಲವರು ಅಕ್ರಮವಾಗಿ ಹೋಮ್‌ ಸ್ಟೇ ನಡೆಸುವವರ ಸಹಾಯ ಪಡೆದು ಖಾಸಗಿ ರಸ್ತೆಯಾಗಿಯೂ ಬರುತ್ತಿದ್ದಾರೆ, ಅನಧಿಕೃತ ಹೋಂ ಸ್ಟೇಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸುತ್ತಿದ್ದಾರೆ.

error: Content is protected !!

Join the Group

Join WhatsApp Group