ಕಾರು ಅಪಘಾತ ➤ ದ. ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪ್ರಾಣಪಾಯದಿಂದ ಪಾರು



(ನ್ಯೂಸ್ ಕಡಬ) newskadaba.com ಮೂಡಬಿದಿರೆ,ಜು.01: ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಅವರ ಕಾರು ಅಪಘಾತಗೊಂಡ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅದೃಷ್ಟಶವಾತ್ ಸುದರ್ಶನ್ ಮೂಡಬಿದಿರೆ ಅವರು ಅಪಾಯವಿಲ್ಲದೆ ಪಾರಾಗಿದ್ದಾರೆ.





ಮೂಡಬಿದಿರೆಯ ಮಿಜಾರು ಸಮೀಪ ಅಪಘಾತ ನಡೆದಿದ್ದು,  ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸುದರ್ಶನ್ ಅವರು ಮೂಡಿಬಿದಿರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ಮಿಜಾರು ಬಳಿಯ ತೋಡಾರು ಸಮೀಪ ಒಳರಸ್ತೆಯಿಂದ ಬಂದ ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸಲ ಹೋಗಿ ಸುದರ್ಶನ್ ಅವರ ಇನ್ನೋವಾ ಕಾರು ಕೆಸರಿನಲ್ಲಿ ಸ್ಕಿಡ್ ಆಗಿ ಪಲ್ಟಿಯಾಗಿದೆ.






 

error: Content is protected !!
Scroll to Top