ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ, ಮದ್ರಾಸ್ ನಡೆಸಿರುವ ಹಿಂದಿ ಪರೀಕ್ಷೆಯಲ್ಲಿ ಶಕ್ತಿರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ವಿಶೇಷ ಶ್ರೇಣಿಯಲ್ಲಿತೇರ್ಗಡೆ

ಮಂಗಳೂರು 26. ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಿದ್ಯಾರ್ಥಿಗಳು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ್ ಫೆಬ್ರವರಿಯಲ್ಲಿ ನಡೆಸಿರುವ ಹಿಂದಿ ಪ್ರಾಥಮಿಕ ಮತ್ತು ಮಧ್ಯಮ ಪರೀಕ್ಷೆಯಲ್ಲಿ ವಿಶೇಷ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಗೌರವವನ್ನು ತಂದುಕೊಟ್ಟಿದ್ದಾರೆ.

ಒಟ್ಟು 32 ವಿದ್ಯಾರ್ಥಿಗಳು ಪ್ರಾಥಮಿಕ ಪರೀಕ್ಷೆಯನ್ನು ಬರೆದಿದ್ದು, ಅದರಲ್ಲಿ ಪ್ರತ್ಯುಷ್‍ದೇವ್‍ದಾರ್, ಸಾಯಿಸಮರ್ಥ ಮಲ್ಲೂರು, ಸಮ್ಯಖ್‍ ಚಡಗ, ಮತ್ತು ಶ್ರೇಯಸ್‍ ಯು. ಶೆಟ್ಟಿಇವರು ವಿಶೇಷ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ. 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿಉತ್ತೀರ್ಣರಾಗಿದ್ದಾರೆ.

ಮಧ್ಯಮ ಪರೀಕ್ಷೆಯಲ್ಲಿ 14 ಪ್ರಥಮ ಶ್ರೇಣಿ ಮತ್ತು 20 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಆಯುಷ್‍ರಾಜ್ ಪಾಟ್ನ (159/200) ಅಂಕವನ್ನು ಪಡೆಯುವುದರ ಮೂಲಕಮಂಗಳೂರು ತಾಲೂಕುನಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಸಲೋನಿ ಸುಭಾಶ್ (157/200), ಸಿಂಚನ ಹೆಗ್ಡೆ (155/200) ಮತ್ತುಜಿಸ್‍ಮ್ಮಿತ ಹೆಗ್ಡೆ (154/200) ಪಡೆದಿರುವುದಕ್ಕೆ ಶಕ್ತಿ ಶಿಕ್ಷಣ ಸಂಸ್ಥೆಯಡಾ. ಕೆ. ಸಿ. ನಾೈಕ್, ಪ್ರಾಂಶುಪಾಲರಾದ ವಿದ್ಯಾ ಜಿ. ಕಾಮತ್ ಹಾಗೂ ಶಿಕ್ಷಕರು ಹಾಗೂ ಶಿಕ್ಷಕೇತರ ವೃಂದ ಅಭಿನಂಧಿಸಿದೆ.

error: Content is protected !!

Join the Group

Join WhatsApp Group