(ನ್ಯೂಸ್ ಕಡಬ) newskadaba.com ಮಂಗಳೂರು,ಜೂ.25: ಸ್ವಿಪ್ಟ್ ಕಾರೊಂದು ಅತಿವೇಗ ಮತ್ತು ಅಜಾರೂಗತೆಯಿಂದ ಚಲಿಸಿ ಆಕ್ಟಿವಾ ಸ್ಕೂಟರ್ ಮತ್ತು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಯುವತಿ ಗಂಭೀರ ಗಾಯಗೊಂಡು ಮೃತ ಪಟ್ಟ ಗಟನೆ ನಗರದ ಹೊರ ವಲಯದ ಬೆಂಜನಪದವು ದಿವ್ಯ ಜ್ಯೋತಿ ಅಂಗಡಿ ಎದುರು ಬುಧವಾರ ನಡೆದಿದೆ.
ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ 23 ವರ್ಷದ ಶ್ಯಾಮಲಾ ಎಂಬ ಯುವತಿ ಗಂಭೀರಾ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೃತ ಪಟ್ಟ ಶ್ಯಾಮಲಾ ಎಂಬುವವರು ಬಂಟ್ವಾಳದ ಕ್ಷೇತ್ರ ಶಿಕ್ಷಣ ಸಂಪಸ್ಮೂಲ ಕೇಂದ್ರದಲ್ಲಿ ಉದ್ಯೋಗಿಯಾಗಿದ್ದರು. ಇನ್ನು ಯುವತಿ ತನ್ನ ಸ್ನೇಹಿತೆಯ ಜೊತೆಗೆ ಮೊಬೈಲ್ ರಿಚಾರ್ಜ್ ಮಾಡಲು ಅಂಗಡಿಗೆ ಹೋಗುತ್ತಿದ್ದಾಘ ಕಾರ್ ಡಿಕ್ಕಿ ಹೊಡೆದ್ದಿದ್ದು, ಮತ್ತೊಬ್ಬ ಯುವತಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಕಲಾಗಿದ್ದಾರೆ. ಕಾರಿನ ಚಾಲಕ ಘಟನಾಸ್ಥಳದಿಂದ ಪರಾರಿಯಾಗಿದ್ದಾನೆ.