(ನ್ಯೂಸ್ ಕಡಬ) newskadaba.com ಉಳ್ಳಾಲ,ಜೂ.22: ಮುಂಗಾರಿನ ಅಬ್ಬರಕ್ಕೆ ಕರಾವಳಿಯ ಉಳ್ಳಾಲದಲ್ಲಿ ಕಡಲಕೊರೆತ ಆರಂಭಗೊಂಡಿದ್ದು, ಈಗಾಗಲೇ ಹಲವಾರು ಮನೆಗಳು ಕಡಲ ಪಾಲಾಗಿದೆ .ಉಳ್ಳಾಲದಿಂದ ಕಾರವಾರ ವರೆಗಿನ 320 ಕಿ.ಮೀ. ಕಡಲ ತಡಿಯಲ್ಲಿ ಕಡಲಿನ ಪ್ರಕ್ಷುಬ್ಧತೆ ಅಧಿಕವಾಗಿರುವುದರಿಂದ ಅತ್ಯಂತ ಹೆಚ್ಚು ಹಾನಿಗೀಡಾದ ಪ್ರದೇಶಗಳನ್ನು ಗುರುತಿಸಿ ತುರ್ತು ತಡೆಗೋಡೆ ನಿರ್ಮಿಸಲು ಆದೇಶ ನೀಡಲಾಗಿದೆ.
ಸೋಮೇಶ್ವರ ಉಚ್ಚಿಲದಲ್ಲಿ ಮೀನುಗಾರರ ಮನೆಗಳ ರಕ್ಷಣೆಗೆ ಈ ಕೂಡಲೇ ತುರ್ತು ಕಾಮಗಾರಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸೋಮೇಶ್ವರ ಉಚ್ಚಿಲದ ಕಡಲ್ಕೊರೆತ ಪ್ರದೇಶವನ್ನು ರವಿವಾರ ವೀಕ್ಷಿಸಿದ್ದಾರೆ. ಮೀನುಗಾರರು ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ರಕ್ಷಣೆ ಮಾಡುವ ಅನಿವಾರ್ಯತೆ ಇರುವುದರಿಂದ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಗಳ ಜತೆಗೆ ಮಾತನಾಡಿದ್ದೇನೆ. ತುರ್ತಾಗಿ ಕಲ್ಲು ಗಳನ್ನು ಜೋಡಿಸಲು ಬೇಕಾದಂತಹ ಅನುಮತಿ ಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಅ ಧಿಕಾರಿಗಳನ್ನು ಕರೆದು ಯಾವುದೇ ಮೀನುಗಾರರಿಗೆ ತೊಂದರೆಯಾಗದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ಕೊಡಲಾಗಿದೆ ಎಂದರು.