ಮುಂಬೈನಿಂದ ಬಂದ ತೆಕ್ಕಟ್ಟೆ ವ್ಯಕ್ತಿ ಮೃತ್ಯು ➤ ಪತ್ನಿ ಮಗನಿಗೆ ಕೊರೋನಾ ಪಾಸಿಟಿವ್

(ನ್ಯೂಸ್ ಕಡಬ) newskadaba.com ಉಡುಪಿ,ಜೂ.20: ಕೊರೋನಾ ತನ್ನ ಕಬಂಧ ಬಾಹುವನ್ನ ಕರಾವಳಿಯಲ್ಲಿ ವಿಸ್ತರಿಸುತ್ತಲೇ ಇದೆ,  ಅನಾರೋಗ್ಯದಿಂದ ಬಳಲುತ್ತಿದ್ದ ಮುಂಬೈನಿಂದ ವಾಪಸಾದ ತೆಕ್ಕಟ್ಟೆ ವ್ಯಕ್ತಿ ನಿನ್ನೆ ಮೃತಪಟ್ಟಿದ್ದು, ಇದೀಗ ಮೃತ ವ್ಯಕ್ತಿಯ ಪತ್ನಿ ಹಾಗೂ ಮಗನಿಗೆ ಕೂಡ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಇಬ್ಬರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿರುವ ಆರೋಗ್ಯ ಇಲಾಖೆ ಸೂಕ್ತ ಚಿಕಿತ್ಸೆ ನೀಡುತ್ತಿದೆ. ಮೃತ ವ್ಯಕ್ತಿ ಮುಂಬೈಯಿಂದ ಬರುವಾಗ ಪತ್ನಿ, ಪುತ್ರ ಮತ್ತು ಡ್ರೈವರ್ ಜೊತೆಗೆ ಬಂದಿದ್ದರು.

ಆದರೆ ಡ್ರೈವರ್ ಪರೀಕ್ಷಾ ವರದಿ ಮಾತ್ರ ನೆಗೆಟಿವ್ ಬಂದಿದೆ, ಮೃತ ವ್ಯಕ್ತಿಯ ಪೋಸ್ಟ್ ಮಾರ್ಟಂ ಆಗಿ ಜಿಲ್ಲಾಸ್ಪತ್ರೆಯಲ್ಲಿ ಶವವನ್ನು ಇಡಲಾಗಿತ್ತು.ಮೃತವ್ಯಕ್ತಿಗೂ ಕೊರೊನಾ ಸೋಂಕಿರುವ ಕಾರಣ ಅಂತಿಮ ಸಂಸ್ಕಾರದ ಬಗ್ಗೆ ಇಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದರು.

Also Read  ಮದ್ಯದ ಬಾಕ್ಸ್‌ಗಳನ್ನು ತುಂಬಿ ಸಾಗುತ್ತಿದ್ದ ಲಾರಿ ಪಲ್ಟಿ.!

 

error: Content is protected !!
Scroll to Top